ಅತ್ತೆಯೊಂದಿಗೆ ಹೊಲಕ್ಕೆ ಹೋದ ಬಾಲಕಿ ಮೇಲೆ ಅತ್ಯಚಾರ : ಕೃತ್ಯಕ್ಕೆ ಸಾಥ್ ನೀಡಿದ ಅತ್ತೆ..!
ಉತ್ತರ ಪ್ರದೇಶ : ಅಪ್ರಾಪ್ತೆ ಮೇಲೆ ಕಾಮುಕನೋರ್ವ ಅತ್ಯಚಾರವೆಸಗಿದ್ದು, ಈ ಕೃತ್ಯಕ್ಕೆ ಬಾಲಕಿಯ ಸೋದರ ಅತ್ತೆಯೇ ಸಾಥ್ ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾ ದಂಕೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.
ಪತ್ನಿ ಮೇಲೆ ಅನುಮಾನ: ಪತ್ನಿ-ಮಕ್ಕಳ ಮೇಲೆ ಮೃಗದಂತೆ ವರ್ತಿಸಿದ ಶಿಕ್ಷಕ..!
12 ವರ್ಷದ ಬಾಲಕಿ ತನ್ನ ತಾಯಿಯ ಸಂಬಂಧಿಕರ ಮನೆಗೆ ತೆರಳಿದ್ದು, ಸೋದರತ್ತೆಯ ಜೊತೆಗೆ ಹೊಲಕ್ಕೆ ಹೋಗಿದ್ದಾಳೆ. ಹೊಲದಲ್ಲಿದ್ದ ವ್ಯಕ್ತಿಯೊಬ್ಬನಿಗೆ ಬಾಲಕಿಯನ್ನು ಅತ್ತೆಯೇ ಒಪ್ಪಿಸಿದ್ದಾಳೆ. ಕಾಮುಕ ಬಾಲಕಿ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇನ್ನೂ ಈ ಸಂಬಂಧ ದಂಕೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel