ಇಂದು ವಿಶ್ವ ಪತ್ರ ಬರೆಯುವ ದಿನ.
ನಿಮಗೆ ತಿಳಿದಿದೇಯೇ..? ಇಂದು ವಿಶ್ವ ಪತ್ರ ಬರೆಯುವ ದಿನ. ಹೌದು ಪತ್ರ ಎಂದರೆ ಈಗಿನ ಶೇರ್ ಚಾಟ್, ವಾಟ್ಸ್ ಅಪ್, ಮೆಸೇಂಜರ್ ನಂತಹ ಆಧುನಿಕ ಚಾಟ್ ಆಪ್ ಗಳಂತಲ್ಲ..
ಆದಿ ಅನಾದಿ ಕಾಲದಿಂದಲೂ ಸಾಂಪ್ರದಾಯಿಕವಾಗಿ, ನಮ್ಮ ಹಿರಿಯರು ಕಂಡುಹಿಡಿದು, ಜಾರಿಗೊಳಿಸಿದ ಪದ್ಧತಿ.
ಪತ್ರ ವ್ಯವಹಾರ ನಾವು ಸಂವಹನಕ್ಕಾಗಿ ಬಳಸುವ ಒಂದು ಮಾರ್ಗವಾಗಿದೆ.
ಈ ಸಂವಹನ ವೈಯಕ್ತಿಕ , ವ್ಯವಹಾರಿಕ, ಮತ್ತು ಸಾಮಾಜಿಕವಾಗಿ ಸಂಹವನ ನಡೆಸುವ ಪ್ರಕ್ರಿಯೆ.
ಹಿಂದಿನ ಕಾಲದಲ್ಲಿ ದೂರದ ವ್ಯಕ್ತಿಗಳನ್ನ ಸಂದಿಸುವ ಮಾಧ್ಯಮವೆಂದರೆ ಅದು ಪತ್ರ . ನಮಗೀಗಾಲೆ ತಿಳಿದಿರುವ ಹಾಗೇ ಇಂದು ವಿಶ್ವ ಪತ್ರ ಬರೆಯುವ ದಿನ. ಆದ್ದರಿಂದ ಅದರ ಇತಿಹಾಸದ ಕಡೆ ಕೊಂಚಗಮನ ಹರಿಸೋಣ.
ಶತಮಾನದ ಹಿಂದೆ ಅಸ್ತಿತ್ವದಲ್ಲಿ ಬಂದ ಈ ಪತ್ರ ಲೇಖನವು , ಮೊದಲು ಪ್ರಾಚೀನ ಈಜಿಪ್ಟ್ ಹಾಗೂ ಗ್ರೀಸ್ ಕಾಲದಲ್ಲಿ ಹುಟ್ಟಿ ಬಳಕೆಗೆ ಬಂದಿರುವುದಾಗಿದೆ.
ಇದಕ್ಕೂ ಮೊದಲು ಆರಂಭದಲ್ಲಿ ಲೋಹ, ಸೀಸ, ಮೇಣ ಲೇಪಿತ ಮರದ ಸಾಮಗ್ರಗಳ ಮೇಲೆ, ಮಡಿಕೆಗಳು, ತುಣುಕುಗಳು, ಪ್ರಾಣಿಗಳ ಚರ್ಮ ಮತ್ತು ಇದೇ ರೀತಿ ಮತ್ತಿತರ ನಾನಾ ವಸ್ತುಗಳ ಮೇಲೆ ಪತ್ರಗಳನ್ನು ಬರೆಯಲಾಗುತ್ತಿತ್ತು.
ಕಾಲ ಬದಲಾದಂತೆ ಚೀನಾದಲ್ಲಿ ಕಾಗದದ ಆವಿಷ್ಕಾರವು ಪ್ರಪಂಚಕ್ಕೆ ಹೊಸ ಪರಿಚಯ ನೀಡಿತು.
ಇಲ್ಲಿಂದ ಕಾಗದದ ಬಳಕೆ ಎಲ್ಲೆಡೆ ಆರಂಭವಾಯಿತು. ಆಧುನಿಕತೆಯತ್ತ ಮುಂದೆ ಸಾಗಿದಂತೆ ಪ್ರಿಂಟಿಂಗ್ ಪ್ರೆಸ್‌ಗಳ ಪರಿಚಯವು ಆಯಿತು.
ಇಲ್ಲಿಂದ ಕಾಗದದ ಮುದ್ರಣವು ಅತ್ಯಂತ ಅಗ್ಗವಾಯಿತು. ಸಾಮಾನ್ಯ ನಾಗರಿಕರ ಕೈಗೆಟಕುವಂತಾಯಿತು, ಇಲ್ಲಿಂದ ಸಂವಹನದ ಕೀಯೆಯಲ್ಲಿ ಹೆಚ್ಚಿನ ಮಹತ್ವದ ಪಾತ್ರವನ್ನು ಪತ್ರವಹಿಸಿತು.
ಪತ್ರ ಬರವಣಿಗೆಯನ್ನು ಕೆಲಸಕ್ಕಾಗಿ, ಪ್ರೇಮ ಪತ್ರಗಳು ಮತ್ತು ಇತರ ಪತ್ರಗಳ ಉದ್ದೇಶಗಳಿಗಾಗಿ ಜನರು ತಮ್ಮ ಪ್ರೀತಿಪಾತ್ರರು ಅಥವಾ ವಿಷಯಗಳೊಂದಿಗೆ ಸಂವಹನ ನಡೆಸಲು ಈ ಅಭ್ಯಾಸವು ಬಹಳ ಮುಖ್ಯವಾಗ್ಗಿತ್ತು.
ನಿಮಗೆ ತಿಳಿದಿದೆಯೇ….?
2004 ರಲ್ಲಿ ಆಸ್ಟ್ರೇಲಿಯಾದ ಲೇಖಕ, ಕಲಾವಿದ ಮತ್ತು ಛಾಯಾಗ್ರಾಹಕ ರಿಚರ್ಡ್ ಸಿಂಪ್ಕಿನ್
ಅವರು ವಿಶ್ವ ಪತ್ರ ಬರೆಯುವ ದಿನವನ್ನು ಹುಟ್ಟುಹಾಕಿದರು .
ಇವರನ್ನು ಪತ್ರ ಬರವಣಿಗೆಯ ಜನಕ ಎಂದು ಕರೆಯುತ್ತಾರೆ.
ಇವರು ಯಾವಾಗಲೂ ಪತ್ರಗಳನ್ನು ಬರೆಯುವುದನ್ನು ಆರಾಧಿಸುತ್ತಿದ್ದರು.
ವಿಶೇಷ ದಿನದಂದು ಇದನ್ನು ಗೌರವಿಸುವ ಅವಶ್ಯಕತೆಯಿದೆ ಎಂದು ಭಾವಿಸಿದರು.
- ವಿಶ್ವ ಪತ್ರ ಬರವಣಿಗೆಯ ದಿನದಂದು, ಮಾಡ ಬೇಕಾದ ಕೆಲವು ಅಂಶಗಳು.
- ನಿಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸಲು ಇದು ಉತ್ತಮ ಮಾರ್ಗವಾಗಿದೆ.
- ನಿಮ್ಮ ಭಾವನೆಯನ್ನು ವ್ಯಕ್ತ ಪಡಿಸುವಲ್ಲಿ ನಿರ್ದಿಷ್ಟ ವಿಷಯದ ಕುರಿತು, ಏನನ್ನಾದರು ಹೇಳ ಬಯಸಿದಲ್ಲಿ , ಈ ಮಾರ್ಗವನ್ನು ಇಂದು ಒಮ್ಮೆ ಪ್ರಯತ್ನಿಸಿ ನೋಡಿ.
- ನಿಮ್ಮ ವ್ಯಕ್ತಿತ್ವದ ದೃಷ್ಟಿಕೋನ ಅಥವಾ ಸ್ಥಾನವನ್ನು ಯಾರಿಗಾದರೂ ಚೆನ್ನಾಗಿ ಅರ್ಥಮಾಡಿಸ ಬಯಸಿದ್ದಲ್ಲಿ , ಈ ಮಾರ್ಗವನ್ನಾರಿಸಿ ಕೊಂಡರೆಕೊಂಚ ಸಹಾಯಕಾರಿಯಾಗಿದೆ.
- ಈ ಪತ್ರ ಮಾರ್ಗದ ಮಾದರಿಯು ಸಮಸ್ಯೆಯನ್ನು ಕೊಂಚ ಪರಿಹರಿಸಲು ಸಹಾಯಕಾರಿಯಾಗಿದೆ.







