ಬೆಂಗಳೂರು: ಇತ್ತೀಚೆಗೆ ಮೃತಪಟ್ಟ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಮಾತನಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿ ಚಿರು ಪತ್ನಿ ಮೇಘನಾರಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
ನನ್ನ ಪತಿ ಚಿರಂಜೀವಿ ಸರ್ಜಾರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ನನಗೆ ನೋವು ತಂದಿದೆ. ಗರ್ಭೀಣಿಯಾದ ನಾನು ಮಾನಸಿಕವಾಗಿ ನೊಂದಿದ್ದೇನೆ. ನಾನು ಗರ್ಭಿಣಿ, ನನ್ನ ನೆಮ್ಮದಿ ಹಾಳಾಗಿದೆ. ಇಂದ್ರಜಿತ್ ಲಂಕೇಶ್ ಮಾಡಿರುವ ಡ್ರಗ್ಸ್ ಆರೋಪಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಮೇಘನಾರಾಜ್ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ತಾವು ನೀಡಿರುವ ಹೇಳಿಕೆಗೆ ಬೇಷರತ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಕ್ಷಮೆಯಾಚನೆಗೆ ಸೂಚನೆ ನೀಡುವಂತೆ ಕೋರಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೇಘನಾರಾಜ್ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಮೇಘನಾರಾಜ್ ಬರೆದ ಪತ್ರವನ್ನು ಸ್ವೀಕರಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ, ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆಯಾಚಿಸುವಂತೆ ಸೂಚಿಸಿ ಪತ್ರ ಬರೆಯಲು ವಾಣಿಜ್ಯ ಮಂಡಳಿ ನಿರ್ಧರಿಸಿದೆ.
ಮತ್ತೊಂದೆಡೆ, ಪತ್ರದ ಹಿನ್ನೆಲೆಯಲ್ಲಿ ಮೇಘನಾರಾಜ್ ನಿವಾಸಕ್ಕೆ ಹೋಗಿ ಸಾಂತ್ವನ ಹೇಳುತ್ತೇನೆ ಎಂದು ವಾಣಿಜ್ಯ ಮಂಡಳಿ ಕಾರ್ಯಾಧ್ಯಕ್ಷ ಎಂ.ಎನ್ ಸುರೇಶ್ ತಿಳಿಸಿದ್ದಾರೆ.