ಈ ದಿನ… ಆ ವರ್ಷ… 100ನೇ ಶತಕ ದಾಖಲಿಸಿದ್ದ ಸಚಿನ್ ತೆಂಡುಲ್ಕರ್..!

1 min read
sachin tendulkar team india saakshatv

ಈ ದಿನ… ಆ ವರ್ಷ… 100ನೇ ಶತಕ ದಾಖಲಿಸಿದ್ದ ಸಚಿನ್ ತೆಂಡುಲ್ಕರ್..! 

March 16 2012- Nine years since Sachin Tendulkar’s 100th ton

sachin team india saakshatvಸಚಿನ್ ತೆಂಡುಲ್ಕರ್… ಕ್ರಿಕೆಟ್ ಜಗತ್ತಿನ ಎವರ್ ಗ್ರೀನ್ ಹೀರೋ… ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ಹತ್ತಿರ ಹತ್ತಿರ ಎಂಟು ವರ್ಷಗಳಾಗಿವೆ.
ಆದ್ರೂ ಸಚಿನ್ ಕ್ರಿಕೆಟ್ ಪ್ರೀತಿಯನ್ನು ಮಾತ್ರ ಬಿಡಲಿಲ್ಲ. ಅವರ ಬದುಕಿಗೆ ಕ್ರಿಕೆಟ್ ಸಾಕು ಅಂತ ಅನ್ನಿಸುತ್ತಲೇ ಇಲ್ಲ. ಯಾಕಂದ್ರೆ ಕ್ರಿಕೆಟ್ ಆಟವನ್ನು ತನ್ನ ಉಸಿರು ಎಂಬಂತೆ ನಂಬಿಕೊಂಡಿರುವ ಕ್ರಿಕೆಟಿಗ.
ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರ ಸಚಿನ್, ತನ್ನ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಕೆಲವೊಂದು ಬಾರಿ ವೀಕ್ಷಕ ವಿವರಣೆಕಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದರು. ಇನ್ನುಳಿದಂತೆ ತನ್ನ ಕ್ರಿಕೆಟ್ ಅಕಾಡೆಮಿ, ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಈ ನಡುವೆ, ಇದೀಗ ನಡೆಯುತ್ತಿರುವ ವಲ್ರ್ಡ್ ರೋಡ್ ಸೇಫ್ಟಿ ಟೂರ್ನಿಯಲ್ಲೂ ಆಡುತ್ತಿದ್ದರು. ಈ ಟೂರ್ನಿಯಲ್ಲಿ ಸಚಿನ್ ಆಡುತ್ತಿರುವ ರೀತಿ ನೋಡಿದ್ರೆ ಅವರ ದೇಹದಲ್ಲಿ ಇನ್ನೂ ಕ್ರಿಕೆಟ್ ಆಡುವ ಶಕ್ತಿ ಇದೆ ಎಂಬುದು ಅರಿವಾಗುತ್ತಿದೆ.
ಅದೇನೇ ಇರಲಿ, ಸಚಿನ್ ತೆಂಡುಲ್ಕರ್ ಅವರ ಕ್ರಿಕೆಟ್ ಯುಗ ಮುಗಿದು ಹೋಗಿದೆ. ಆದ್ರೆ 24 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಸಾಗಿ ಬಂದ ಹಾದಿ, ಸಾಧನೆಗಳ ಹೆಜ್ಜೆ ಗುರುತುಗಳು ಇನ್ನೂ ಕೂಡ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತವೆ.
ಐದಡಿ ವಾಮನ ಮೂರ್ತಿ ಸಚಿನ್ ತೆಂಡುಲ್ಕರ್ ಮಾಡಿರುವ ದಾಖಲೆಗಳು ಒಂದೆರಡಲ್ಲ. ಈ ಪೈಕಿ ಕೆಲವು ದಾಖಲೆಗಳು ಈಗ ಅಳಿಸಿ ಹೋಗಿವೆ. ಆದ್ರೆ ಮತ್ತೆ ಕೆಲವು ದಾಖಲೆಗಳು ಅಳಿಸಿ ಹೋಗಲು ಇನ್ನೂ ವರ್ಷಗಳು ಬೇಕಾಗುತ್ತವೆ. ಸದ್ಯ ಸಚಿನ್ ತೆಂಡುಲ್ಕರ್ ಅವರ ಪ್ರಚಂಡ ದಾಖಲೆಗಳನ್ನು ಅಳಿಸಿ ಹಾಕುವ ಸಾಮಥ್ರ್ಯವಿರುವುದು ವಿರಾಟ್ ಕೊಹ್ಲಿಗೆ ಮಾತ್ರ.

March 16 2012- Nine years since Sachin Tendulkar’s 100th ton

sachin tendulkar team india saakshatv
I

ಇದೀಗ ಸಚಿನ್ ತೆಂಡುಲ್ಕರ್ ದಾಖಲೆಯೊಂದು ಮತ್ತೊಮ್ಮೆ ಚಾಲ್ತಿಗೆ ಬಂದಿದೆ. ಹೌದು, ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 49ನೇ ಶತಕ ಹಾಗೂ ಒಟ್ಟು 100 ಶತಕ ದಾಖಲಿಸಿ ಇತಿಹಾಸ ನಿರ್ಮಿಸಿದ್ದರು.
ಸರಿಯಾಗಿ 9 ವರ್ಷಗಳ ಹಿಂದೆ ಮಾರ್ಚ್ 16, 2012ರಲ್ಲಿ ಸಚಿನ್ ತೆಂಡುಲ್ಕರ್ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾ ದೇಶ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ 49ನೇ ಶತಕ ದಾಖಲಿಸಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಆಗಲೇ 51 ಶತಕ ಸಿಡಿಸಿದ್ದರು.
147 ಎಸೆತಗಳಲ್ಲಿ ಸಚಿನ್ ತೆಂಡುಲ್ಕರ್ 114 ರನ್ ಗಳಿಸಿದ್ದರು. ಇದ್ರಲ್ಲಿ ಒಂದು ಸಿಕ್ಸರ್ ಮತ್ತು 17 ಬೌಂಡರಿಗಳಿದ್ದವು.
ಅಷ್ಟಕ್ಕೂ ಸಚಿನ್ ತೆಂಡುಲ್ಕರ್ ಈ ಶತಕಕ್ಕಾಗಿ ಸಾಕಷ್ಟು ಒದ್ದಾಟ, ಪರದಾಟ ಕೂಡ ಮಾಡಿದ್ದರು. ಕೊನೆಗೂ ಸಚಿನ್ ಇತಿಹಾಸ ನಿರ್ಮಿಸುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನು ಅರ್ಥಪೂರ್ಣವಾಗಿಸಿಕೊಂಡು ವಿದಾಯವನ್ನು ಹೇಳಿದ್ದರು.
ವಿಶ್ವ ಕ್ರಿಕೆಟ್ ನಲ್ಲಿ ನೂರು ಶತಕಗಳು, 164 ಅರ್ಧಶತಗಳು, ಏಕದಿನ ಕ್ರಿಕೆಟ್ ನಲ್ಲಿ 49 ಶತಕಗಳು, ಟೆಸ್ಟ್ ಕ್ರಿಕೆಟ್ ನಲ್ಲಿ 51 ಶತಕಗಳು, ಟೆಸ್ಟ್ ಕ್ರಿಕೆಟ್ ನಲ್ಲಿ 15921 ರನ್, ಏಕದಿನ ಕ್ರಿಕೆಟ್ ನಲ್ಲಿ 18,426 ರನ್ ಹಾಗೂ ಒಟ್ಟು 34,357 ಅಂತಾರಾಷ್ಟ್ರೀಯ ರನ್ ಗಳು ಈಗಲೂ ವಿಶ್ವ ಕ್ರಿಕೆಟ್ ನಲ್ಲಿ ದಾಖಲೆಗಳಾಗಿಯೇ ಉಳಿದಿವೆ.
ಯಾರು ಏನು ಅನ್ನಲಿ.. ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ಬ್ರಹ್ಮ..

Sachin team india saakshatvಕ್ರಿಕೆಟ್ ಬ್ರಹ್ಮನ ಹೆಜ್ಜೆ ಗುರುತು..!

ಈ ದಿನ ಆ ವರ್ಷ…
ಮಾರ್ಚ್ 16, 2012

100ನೇ ಅಂತಾರಾಷ್ಟ್ರೀಯ ಶತಕ
ಏಷ್ಯಾಕಪ್ ನಲ್ಲಿ ಬಾಂಗ್ಲಾ ವಿರುದ್ಧ 117 ರನ್

ಇಂದಿಗೂ ಮುರಿಯದ ದಾಖಲೆಗಳು.. ಮುಂದೆ…!

ಏಕದಿನ ಕ್ರಿಕೆಟ್ ನಲ್ಲಿ 49 ಶತಕ
ಟೆಸ್ಟ್ ಕ್ರಿಕೆಟ್ ನಲ್ಲಿ 51 ಶತಕ

ಟೆಸ್ಟ್ ಕ್ರಿಕೆಟ್ ನಲ್ಲಿ 68 ಅರ್ಧಶತಕ
ಏಕದಿನ ಕ್ರಿಕೆಟ್ ನಲ್ಲಿ 96 ಅರ್ಧಶತಕ

ಟೆಸ್ಟ್ ಕ್ರಿಕೆಟ್ ನಲ್ಲಿ 15, 921 ರನ್
ಏಕದಿನ ಕ್ರಿಕೆಟ್ ನಲ್ಲಿ 18, 426 ರನ್
ಒಟ್ಟು ದಾಖಲಿಸಿದ್ದ ರನ್ ಗಳು 34, 347

#March 16 2012 @Sachin Tendulkar  #Sachin Tendulkar100th ton #bcci #icc #worldcricket #cricket @saakshatv #saakshatvsports

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd