ಕಾನೂನಿಗಿಂತ ಯಾರೂ ಡೊಡ್ಡವರಲ್ಲ: ಮೋದಿ ವಾರ್ನಿಂಗ್ ಕೊಟ್ಟಿದ್ದೇಕೆ..!

ನವದೆಹಲಿ: ಕಾನೂನಿನ ಮುಂದೆ ಪ್ರಧಾನಿಯಾಗಲಿ, ಸಾಮಾನ್ಯ ಜನರಾಗಲೀ ಯಾರೂ ಹೊರತಲ್ಲ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಾವೀಗ ಲಾಕ್‍ಡೌನ್ ನಂತರ ಅನ್‍ಲಾಕ್-2 ಪ್ರವೇಶ ಮಾಡಿದ್ದೇವೆ. ಇದೀಗ ದೇಶಾದ್ಯಂತ ಮುಂಗಾರು ಪ್ರವೇಶವಾಗಿ ಉತ್ತಮ ಮಳೆ ಸುರಿಯುತ್ತಿದೆ. ಕೆಲ ತಿಂಗಳ ನಂತರ ಚಳಿಗಾಲ ಬರಲಿದ. ಈ ಅವಧಿಯಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಸಾಮಾನ್ಯವಾಗಿದೆ. ಕೊರೊನಾ ವಿರುದ್ಧದದ ನಮ್ಮ ಹೋರಾಟ ಸರಿ ದಾರಿಯಲ್ಲಿದೆ. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂದು ಕರೆ ನೀಡಿದರು.
ಅನ್‍ಲಾಕ್-1ರ ನಂತರ ಕಂಟೈನ್‍ಮೆಂಟ್ ಝೋನ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕೆಲವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂಬ ಕಾನೂನೂ ಜಾರಿಯಲ್ಲಿದೆ. ಈ ಕಾಯ್ದೆಯಿಂದ ಪ್ರಧಾನಿಯಾದ ನಾನು ಕೂಡ ಹೊರತಲ್ಲ. ಮನೆಯಿಂದ ಹೊರಗೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಲೇ ಬೇಕು. ಇಲ್ಲವಾದರೆ ಕಠಿಣಕ್ರಮ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ಅನ್‍ಲಾಕ್-1 ನಂತರ ಜನರ ಓಡಾಟ ಹೆಚ್ಚಿದ್ದು, ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಡಲಾಗುತ್ತಿದೆ. ಕೊರೊನಾ ಸೋಂಕು ಸಮುದಾಯದ ಹಂತಕ್ಕೆ ಹರಡುತ್ತಿದ್ದರೂ ಮಾಸ್ಕ್ ಧರಿಸದೇ ಇರುವುದು ಪ್ರಧಾನಿ ಮೋದಿ ಅವರ ಬೇಸರಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This