ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಚಿಕಿತ್ಸೆಗೆ ಸೂಕ್ತ ಔಷಧವಿಲ್ಲದೆ ಆತಂಕದಲ್ಲಿದ್ದ ವೈದ್ಯ ಲೋಕ ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಡೆಕ್ಸಮೆಥಸೋನ್ ಔಷಧ.
ಗಂಭೀರ ಪ್ರಕರಣಗಳಲ್ಲಿ ಮಾತ್ರ ಡೆಕ್ಸಮೆಥಸೋನ್ ಔಷಧ ಬಳಕೆ ಮಾಡಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇಂಗ್ಲೆಂಡ್‍ನಲ್ಲಿ ಕೊರೊನಾ ರೋಗಿಗಳ ಮೇಲೆ ಡೆಕ್ಸಮೆಥಸೋನ್ ಔಷಧ ಪ್ರಯೋಗ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ರೋಗಿಗಳಿಗೆ ಈ ಔಷಧ ನೀಡಿದಾಗ ಉತ್ತಮ ಫಲಿತಾಂಶ ಬಂದಿದೆ. ಹೀಗಾಗಿ ಈ ಔಷಧವನ್ನು ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ನೀಡಿದೆ. ಹೀಗಾಗಿ ದೇಶದ ಕೊರೊನಾ ಚಿಕಿತ್ಸೆಗೆ ಡೆಕ್ಸಮೆಥಸೋನ್ ಔಷಧ ಬಳಕೆ ಮಾಡಲಾಗುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಡೆಕ್ಸಮೆಥಸೋನ್‍ನಲ್ಲಿ ಸ್ಟಿರಾಯ್ಡ್ ಅಂಶ ಹೆಚ್ಚಿದೆ. ಹೀಗಾಗಿ ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿರುವ ಹಾಗೂ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಿರುವ ರೋಗಿಗಳಿಗೆ ಮಾತ್ರ ಡೆಕ್ಸಮೆಥಸೋನ್ ಔಷಧಿ ಬಳಸಬಹುದು. ಈ ಔಷಧ ಬಳಕೆಯಿಂದ ಐದರಲ್ಲಿ ಒಂದು ಭಾಗದಷ್ಟು ಜೀವಗಳನ್ನು ಉಳಿಸಲು ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಡೆಕ್ಸಮೆಥಸೋನ್ ಔಷಧವನ್ನು ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಳಿಗೆ ಬಳಕೆ ಮಾಡಲಾಗುತ್ತಿದೆ. ಆದರೆ, ಕೊರೊನಾ ರೋಗಿಗಳಿಗೆ ಈ ಔಷಧವನ್ನ ನೀಡಬೇಕೇ ಬೇಡವೇ ಎಂಬ ಗೊಂದಲ ಇತ್ತು. ವಿಶ್ವ ಆರೋಗ್ಯ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಕೊರೊನಾ ಚಿಕಿತ್ಸೆಗೆ ನೀಡಲು ಅನುಮತಿ ನೀಡಲಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ 2025
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಇದರ ವತಿಯಿಂದ ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಮಿನಿಸ್ಟ್ರಿಗಳಲ್ಲಿ ಖಾಲಿಯಾಗಿರುವ ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ...