ಗಿಡಗಳಿಗೆ ನೀರುಣಿಸುವುದನ್ನ ನೆನಪಿಸಲು ಬರುತ್ತಿದೆ ಸ್ಮಾರ್ಟ್ ವಾಚ್
ಮನೆಯ ಸುತ್ತ ಗಿಡಗಳನ್ನ ನಡೆಬೇಕು ಹಸಿರು ಬೆಳಸಬೇಕು ಎನ್ನುವ ಉತ್ಸಾಹ ತುಂಬಾ ಜನರಲ್ಲಿ ಇರುತ್ತೆ ಆದರೆ ಇದಿ ಕೆಲವೊಮ್ಮೆ ಆರಂಭ ಶೂರತ್ವ ಅಷ್ಟೇ ಆಗಿಬಿಡುತ್ತದೆ, ನಂತರ ಗಿಡಗಳ ಆರೈಕೆ ಮಾಡುದುದನ್ನೇ ಬಿಟ್ಟು ಬಿಡುತ್ತಾರೆ. ಗಿಡಗಳನ್ನ ನೆಟ್ಟು ನೀರುಣಿಸುವುದನ್ನ ಮರೆತುಬಿಡುತ್ತಾರೆ. ಸಮಸ್ಯೆಗೆಂದೆ ವಿಜ್ಞಾನಿಗಳು ಪರಿಹಾರವನ್ನು ಕಂಡುಕೊಂಡಿದ್ದಾರೆ.
ಬ್ರೆಜಿಲಿಯನ್ ನ್ಯಾಷನಲ್ ಲ್ಯಾಬೊರೇಟರಿ ಆಫ್ ನ್ಯಾನೊಟೆಕ್ನಾಲಜಿಯ ಸಂಶೋಧಕರು ಇದಕ್ಕೆಂದೆ ಸ್ಮಾರ್ಟ್ ವಾಚ್ ಒಂದನ್ನ ರಚಿಸಿದ್ದಾರೆ ಆದರೆ ಇದನ್ನ ಧರಿಸಬೇಕಿರುವುದು ಮನುಷ್ಯರಲ್ಲ, ಗಿಡಗಳು. ಈ ಸ್ಮಾರ್ಟ್ ವಾಚ್ ನ ಮೂಲಕ ಸಸ್ಯಗಳಿಗೆ ಯಾವಾಗ ಮತ್ತು ಎಷ್ಟು ನೀರು ಕೊಡಬೇಕು ಎಂಬುದು ತಿಳಿಯಲು ಸಾಧ್ಯವಾಗುತ್ತದೆ.
ಸ್ಮಾರ್ಟ್ ವಾಚ್ ಹೇಗೆ ಕೆಲಸ ಮಾಡುತ್ತದೆ?
ಸಸ್ಯಗಳಿಗಾಗಿ ತಯಾರಿಸಲಾದ ಸ್ಮಾರ್ಟ್ ವಾಚ್ ಮನುಷ್ಯರ ಸ್ಮಾರ್ಟ್ ವಾಚ್ನಂತೆ ಕೆಲಸ ಮಾಡುತ್ತದೆ. ನಾವು ಮಣಿಕಟ್ಟಿನ ಮೇಲೆ ಸ್ಮಾರ್ಟ್ ವಾಚ್ ಧರಿಸಿದಂತೆ, ಸಸ್ಯದ ಎಲೆಗಳ ಮೇಲೆ ಸ್ಮಾರ್ಟ್ ವಾಚ್ ಸೆನ್ಸಾರ್ ನ್ನ ಇರಿಸಬೇಕು.
ಸಂಶೋಧಕರ ಪ್ರಕಾರ, ಈ ಸೆನ್ಸಾರ್ ಅಪ್ಲಿಕೇಶನ್ಗೆ ನೊಂದಿಗೆ ಕನೆಕ್ಟಿವಿಟಿ ಹೊಂದಿರುತ್ತದೆ. ಈ ಅಪ್ಲೀಕೇಷನ್ ನ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಬೇಕು. ಈ ಅಪ್ಲಿಕೇಶನ್ ವೈರ್ಲೆಸ್ ತಂತ್ರಜ್ಞಾನದ ಮೂಲಕ ಸಸ್ಯದ ಸಂಪೂರ್ಣ ಡೇಟಾವನ್ನು ಬಳಕೆದಾರರಿಗೆ ವರ್ಗಾಯಿಸುತ್ತದೆ. ಇದರ ಮೂಲಕ ಬಳಕೆದಾರರು ಸಸ್ಯದಲ್ಲಿನ ನೀರಿನ ಮಟ್ಟವನ್ನ ಆಗಾಗೆ ಚೆಕ್ ಮಾಡಿಕೊಳ್ಳಬಹುದು. ಆದರೆ ಇದಿನ್ನೂ ಪ್ರಯೋಗಮಟ್ಟದಲ್ಲಿದೆ.