ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಪತ್ತೆ..?  | ಡೆಡ್ಲಿ ಜಿ-4

ವಾಷಿಂಗ್ಟನ್: ಚೀನಾ ವೈರಸ್ ಎಂಬ ಹಣೆಪಟ್ಟಿ ಹೊಂದಿರುವ ಮಹಾಮಾರಿ ಕೊರೊನಾ ಜಗತ್ತಿನಾದ್ಯಂತ ಮರಣ ಮೃದಂಗ ಮುಂದುವರೆಸಿದೆ. ಕೊರೊನಾ ಬೆನ್ನಲ್ಲೇ, ಮತ್ತೊಂದು ಶಕ್ತಿಶಾಲಿ ಡೆಡ್ಲಿ ಹಂದಿಜ್ವರದ ವೈರಸ್ ಚೀನಾದಲ್ಲಿ ಹರಡಲು ಆರಂಭಿಸಿದೆ ಎನ್ನಲಾಗಿದೆ.
ಚೀನಾದ ವುಹಾನ್‍ನ ಹಸಿ ಮಾಂಸ ಮಾರುಕಟ್ಟೆ ಮೂಲಕ ಹರಡಿದ ಕೊರೊನಾ ವೈರಸ್, ಈಗಾಗಲೇ ಒಂದು ಕೋಟಿಗೂ ಅಧಿಕ ಮಂದಿಗೆ ತಗುಲಿದ್ದು, 5 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ.
ಕೊರೊನಾ ಆಘಾತದಿಂದ ಜಗತ್ತು ತತ್ತರಿಸಿ ಹೋಗಿರುವ ಬೆನ್ನಲ್ಲೇ, ಕೊರೊನಾಗಿಂತ ಡೇಂಜರ್ ಸಾಂಕ್ರಾಮಿಕ ವೈರಸ್ ಚೀನಾದಲ್ಲಿ ಕಂಡು ಬಂದಿದೆ ಎಂದು ಅಮೆರಿಕದ ವಿಜ್ಞಾನ ನಿಯತಕಾಲಿಕೆ ಪನಾಸ್ ವರದಿ ಮಾಡಿದೆ.
ಹೆಚ್1ಎನ್1 ಜಾತಿಗೆ ಸೇರಿದ ಈ ಡೆಡ್ಲಿ ವೈರಸ್‍ಗೆ ಸದ್ಯ ಜಿ-4 ಎಂದು ಹೆಸರಿಡಲಾಗಿದೆ. 2009ರಲ್ಲಿ ಕಾಣಿಸಿಕೊಂಡಿದ್ದ ಹೆಚ್1ಎನ್1 ವೈರಸ್ ಜಗತ್ತಿನಾದ್ಯಂತ ಹರಡಿ ಲಕ್ಷಾಂತರ ಜನರನ್ನು ಬಲಿ ಪಡೆದಿದೆ.
ಜಿ-4 ವೈರಸ್ ಕೂಡ ಸಾಂಕ್ರಾಮಿಕ ವೈರಸ್ ಆಗಿದ್ದು, ಚೀನಾದಲ್ಲಿ ಹಂದಿಗಳ ಮೂಲಕ ಮನುಷ್ಯರಿಗೆ ಹರಡಿದೆ ಎಂದು ನಿಯತಕಾಲಿಕೆ ಉಲ್ಲೇಖ ಮಾಡಿದೆ. ಸಾಂಕ್ರಾಮಿಕ ವೈರಸ್ ಆಗಿರುವ ಜಿ-4 ಮನುಷ್ಯರಿಂದ ಮನುಷ್ಯರಿಗೆ ಹರಡುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
2011ರಿಂದ 2018ರವರೆಗೆ ಚೀನಾದ 10 ಪ್ರಾಂತ್ಯಗಳ ಪಶು ಆಸ್ಪತ್ರೆಗಳು, ಮಾಂಸದ ಮಾರುಕಟ್ಟೆಗಳಲ್ಲಿ ಹಂದಿಗಳಿಂದ ಪಡೆದ 30 ಸಾವಿರ ಸ್ಯಾಂಪಲ್‍ಗಳಲ್ಲಿ 179 ಬಗೆಯ ವೈರಸ್‍ಗಳು ಪತ್ತೆಯಾಗಿವೆ. ಈ 176ರ ವೈರಸ್‍ಗಳಲ್ಲಿ 2016ರಿಂದೀಚೆಗೆ ಕೆಲ ವೈರಸ್‍ಗಳು ತುಂಬಾ ಶಕ್ತಿಶಾಲಿಯಾಗಿವೆ.
ಕೊರೊನಾದಂತೆಯೇ ಜಿ-4 ವೈರಸ್ ಕೂಡ ಮನುಷ್ಯರ ದೇಹ ಸೇರುತ್ತಿದ್ದಂತೆ ಡೇಂಜರ್ ಆಗಲು ಪ್ರಾರಂಭಿಸಿ ಸಂಖ್ಯೆಯನ್ನು ದ್ವಿಗುಣಗೊಳಿಸಲು ಶುರು ಮಾಡುತ್ತದೆ. ಕೊರನಾದಂತೆಯೇ ಜ್ವರ, ಶೀತ ಹಾಗೂ ಕೆಮ್ಮು ಜಿ-4 ಹಂದಿಜ್ವರದ ಲಕ್ಷಣಗಳೂ ಆಗಿವೆ.
ರೋಗ ನಿರೋಧಕ ಶಕ್ತಿ ಹೊಂದಿರುವವರು ಕೊರೊನಾದಿಂದ ಬಚಾವಾಗಬಹುದು. ಆದರೆ, ಜಿ-4ನಿಂದ ಬಚಾವಾಗಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಹಂದಿಗಳಿಂದ ಮನುಷ್ಯರಿಗೆ ಜಿ-4 ವೈರಸ್ ಹರಡಿದ್ದರೂ, ಮನುಷ್ಯರಿಂದ ಮನುಷ್ಯರಿಗೆ ಹರಡಿರುವ ಬಗ್ಗೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಇದೇ ವಿಜ್ಞಾನಿಗಳನ್ನು ಆತಂಕಕ್ಕೆ ದೂಡಿದೆ. ಸೈಲೆಂಟ್ ಕಿಲ್ಲರ್‍ನಂತೆ ಯಾವಾಗ ತನ್ನ ವಕ್ರದೃಷ್ಟಿ ಬೀರಲು ಆರಂಭ ಮಾಡುತ್ತದೋ ಎಂಬುದು ವಿಜ್ಞಾನಿಗಳ ಚಿಂತೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This