ಚಾಮರಾಜನಗರ: ಶ್ರೀಮಂತ ಮಕ್ಕಳು ಓದು ಶಾಲೆಗಳಲ್ಲಿ ತಿನ್ನುವ ಐಸ್ ಕ್ರೀಮ್ ಗೆ ಡ್ರಗ್ಸ್ ಸವರಿ ಕೊಡುವ ದೊಡ್ಡು ಗುಮಾನಿ ಇದ್ದು, ಈ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಈ ಸಂಬಂಧ ಮಾತನಾಡಿರುವ ಅವರು ಯುವ ಜನರನ್ನ ಹಾಳು ಮಾಡುವ ಇಂತಹವರನ್ನ ನಾವು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಡ್ರಗ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ಸಮಾಜ ಹಾಗೂ ಯುವ ಜನಾಂಗವನ್ನ ದುರ್ಬಲಗೊಳಿಸುತ್ತದೆ. ಇದನ್ನ ಬೇರು ಸಮೇತವಾಗಿ ಕಿತ್ತು ಹಾಕಬೇಕು. ಯುವ ಜನತೆಗೆ ಡ್ರಗ್ಸ್ ಬಲಿಯಾಗುವುದನ್ನ ಸಮಾಜ ಸಹಿಸುವುದಿಲ್ಲ ಎಂದಿದ್ದಾರೆ.