ತಪ್ಪಿದ ಮಹಾ ಯಡವಟ್ಟು : ಸಾವನ್ನ ಗೆದ್ದು ಬಂದ ಯುವಕ

1 min read

ತಪ್ಪಿದ ಮಹಾ ಯಡವಟ್ಟು : ಸಾವನ್ನು ಗೆದ್ದು ಬಂದ ಯುವಕ

ಬಾಗಲಕೋಟೆ : ಜಿಲ್ಲೆಯ ರವಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಅಪರೂಪದ ಮತ್ತು ಯಾರೂ ನಿರೀಕ್ಷೆ ಮಾಡಿರದ ಘಟನೆವೊಂದು ನಡೆದಿದೆ. ಮೃತಪಟ್ಟಿದ್ದಾನೆ ಎಂದು ಭಾವಿಸಿ ಮರಣೋತ್ತರ ಪರೀಕ್ಷೆಗೆ ಕಳುಸಿದ್ದ ಯುವಕ, ಮತ್ತೆ ಬದುಕಿ ಬಂದಿದ್ದಾನೆ.

ಹೌದು..! ಇದು ಅಚ್ಚರಿ ಎನಿಸಿದ್ರೂ ನಂಬಲೇಬೇಕಾದ ಸತ್ಯ. ಸದ್ಯ ಶವಾಗಾರ ತಲುಪಿ ಮತ್ತೆ ವಾಪಸ್ ಆಸ್ಪತ್ರೆಗೆ ಮರಳಿರುವ ವ್ಯಕ್ತಿಯ ಹೆಸರು ಶಂಕರ್ ಗೊಂಬಿ. ಕಳೆದ ತಿಂಗಳು ಫೆಬ್ರವರಿ 27 ರಂದು ಶಂಕರ್ ಗೊಂಬಿ ಅವರಿಗೆ ಅಪಘಾತವಾಗಿತ್ತು. ರಸ್ತೆದಾಟುವಾಗ ಕಾರು ಡಿಕ್ಕಿ ಹೊಡೆದು ತಲೆಗೆ ಗಂಭೀರವಾದ ಗಾಯವಾಗಿತ್ತು. ಕೂಡಲೇ ಅವರನ್ನ ಮಹಾಲಿಂಗಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ತಲೆಗೆ ತೀವ್ರವಾದ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ವೆಂಟಿಲೇಟರ್ ನಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿತ್ತು. ಚಿಕಿತ್ಸೆಗೆ ಅವರು ಸ್ಪಂದಿಸದ ಕಾರಣ, ಬದುಕುವ ಸಾಧ್ಯತೆ ಕಡಿಮೆ ಎಂದು ಅಲ್ಲಿನ ವೈದ್ಯರು ವೆಂಟಿಲೇಟರ್ ಅಳವಡಿಸಿ ಆಂಬುಲೆನ್ಸ್ ಮೂಲಕ ಮಹಾಲಿಂಗಪುರ ಪಟ್ಟಣಕ್ಕೆ ಕಳುಹಿಸಿಕೊಟ್ಟಿದ್ದರು.

ಇತ್ತ ಮಹಾಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ಶಂಕರ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಇದಾದ ಬಳಿಕ ಯುವಕನ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಇನ್ನೇನು ಮರಣೋತ್ತರ ಪರೀಕ್ಷೆಗೆ ಮುಂದಾದಾಗ ಉಸಿರಾಟ, ಭುಜ ಕಾಲು ಚಲನವಲನವಾಗಿದ್ದನ್ನ ವೈದ್ಯರು ಗಮನಿಸಿದ್ದಾರೆ. ಕೂಡಲೇ ಹಿರಿಯ ವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಮತ್ತೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಮುಂದುವರಿಸಿದ್ದಾರೆ.

ಇನ್ನೊಂದೆಡೆ ಶಂಕರ್ ಅವರ ಸ್ನೇಹಿತರು ಸೋಶಿಯಲ್ ಮೀಡಿಯಾದಲ್ಲಿ ಶಂಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಫೇಸ್ ಬುಕ್ ನಲ್ಲಿ ಮಿಸ್ ಯೂ ಅಂತಾ ಪೋಸ್ಟ್ ಹಾಕಿ ಕಂಬನಿ ಮಿಡಿದಿದ್ದರು. ಈ ಮಧ್ಯೆ ಶಂಕರ್ ಬದುಕಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ನೇಹಿತರು ಶ್ರದ್ಧಾಂಜಲಿ ಪೋಸ್ಟ್ ಡಿಲೀಟ್ ಮಾಡಿ, ಸಾವನ್ನು ಗೆದ್ದು ಬಾ ಗೆಳೆಯ ಎಂದು ಹೊಸ ಪೆÇೀಸ್ಟ್ ಗಳನ್ನು ಹಾಕಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd