ಧರ್ಮನಿಂದನೆ ಮಸೇಜ್ ಕಳಹಿಸಿದ ಪಾಕಿಸ್ತಾನಿ ಮಹಿಳೆಗೆ ಮರಣ ದಂಡನೆ…
ಪಾಕಿಸ್ತಾನ : ಪಾಕಿಸ್ತಾನದ ಮಹಿಳೆಯೊಬ್ಬರು ಧರ್ಮನಿಂದನೆ ಮಸೇಜ್ ಕಳಹಿಸಿದ ಆರೋಪದಡಿ ಅವರಿಗೆ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿಸಲಾಗಿದೆ.. 26 ವರ್ಷದ ಅನೀತಾ ಅಥೀಕ್ ಎಂಬಾಕೆಯನ್ನ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಅನಿಕಾ ವಿರುದ್ಧ ಫಾರೂಕ್ ಹಸನತ್ 2020ರಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ರಾವಲ್ಪಿಂಡಿ ನ್ಯಾಯಾಲಯ, ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಮ್ ಗೆ ಅವಹೇಳನ ಮತ್ತು ಸೈಬರ್ ಕ್ರೈಮ್ ಅಪರಾಧದ ಅಡಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ.
ಅನಿಕಾ ಹಾಗೂ ಫಾರೂಕ್ ಇಬ್ಬರೂ ಸ್ಬೇಹಿತರಾಗಿದ್ದರು ಎನ್ನಲಾಗಿದೆ.. ಆದ್ರೆ ಯಾವುದೋ ವಿಚಾರವಾಗಿ ಇವರಿಬ್ಬರ ನಡುವೆ ಮನಸ್ಥಾಪ ಉಂಟಾದಾಗ ಅನಿಕಾ ಪ್ರವಾದಿಯ ವ್ಯಂಗ್ಯಚಿತ್ರವನ್ನು ವಾಟ್ಸಪ್ ನಲ್ಲಿ ಫಾರೂಕ್ ಗೆ ಕಳುಹಿಸಿದ್ದಾರೆ.. ಫಾರೂಕ್ ಅನಿಕಾಗೆ ಕ್ಷಮೆಯಾಚಿಸಿ ಫೋಟೋ ಡಿಲೀಟ್ ಮಾಡುವಂತೆ ಕೇಳಿದ್ರೂ ಮಹಿಳೆ ಒಪ್ಪದ ಕಾರಣ ಆಕೆಯ ವಿರುದ್ಧ ಧರ್ಮನಿಂದನೆಯ ಆರೋಪ ಹೊರಿಸಿದ್ದ. ಇದೀಗ ಮಹಿಳೆಯ ಮೇಲಿನ ಆರೋಪ ಸಾಬೀತಾಗಿದ್ದು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೇ ಗಲ್ಲು ಶಿಕ್ಷೆ ನೀಡಿದೆ..
ದೇಶದಲ್ಲಿ 3 ಲಕ್ಷ ಕೋವಿಡ್ ಕೇಸ್ ಪತ್ತೆ , ಮೂರನೇ ಅಲೆಯಲ್ಲಿ ವಿದ್ಯಾರ್ಥಿಗಳೇ ಟಾರ್ಗೆಟ್, ಬಿಜೆಪಿ – ಕಾಂಗ್ರೆಸ್ ಟ್ವೀಟ್ ವಾರ್ : TOP 10 NEWS
ಅನಿಕಾ ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಂ ಧರ್ಮದ ಅವಮಾನ ಹಾಗೂ ಸೈಬರ್ ಕ್ರೈಂ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಾಕ್ಷ್ಯಗಳೊಂದಿಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಪೊಲೀಸರು ಆಕೆಯ ಮೇಲೆ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗೆ ಅನಿಕಾಳನ್ನು ಬಂಧಿಸಿದ್ದರು. ಆದರೆ ಅನಿಕಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಳು. ನ್ಯಾಯಾಲಯ ವಿಚಾರಣೆಯ ವೇಳೆ ಆಕೆ ಫಾರೂಕ್ ಉದ್ದೇಶಪೂರ್ವಕವಾಗಿ ಹೀಗೆ ಆರೋಪ ಹೊರಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಳು. ಆದ್ರೆ ಆಕೆಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟಿಸಲಾಗಿದೆ.. ಇದೇ ಮೊದಲ ಬಾರಿಗೆ ಧರ್ಮನಿಂದನೆಯ ವಿಚಾರವಾಗಿ ಪಾಕಿಸ್ತಾನದಲ್ಲಿ ಗಲ್ಲಿಗೆ ಗುರಿಪಡಿಸಲಾಗ್ತಿದೆ..