ಬಳ್ಳಾರಿ : ದೇಶದ ಅತಿ ದೊಡ್ಡ ಕಾರ್ಖಾನೆಯಾಗಿರುವ ಜಿಂದಾಲ್ ನಲ್ಲಿ ನಷ್ಟದ ನೆಪ ಹೇಳಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಹೀಗೆ ಕೆಲಸದಿಮದ ತೆಗೆದುಹಾಕಿದರೆಲ್ಲರೂ ಹಣೆಬರಹ ಎಂದುಕೊಡು ಸುಮ್ಮನೆ ಹೊರನಡೆದಿದ್ರೆ, ಆದ ಅನ್ಯಾಯಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಾರ್ಮಿಕರೊಬ್ಬರು ಏಕಾಂಗಿಯಾಗಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.
ಹೌದು! ಜಿಂದಾಲ್ ಕಾರ್ಕಾನೆ ಕಾರ್ಮಿಕರನ್ನು ಕೆಲಸದಿಂದ ಕೈಬಿಡುತ್ತಿದ್ದು, ಸಾವಿರಾರು ನೌಕರರ ಕೆಲಸಕ್ಕೆ ಕತ್ತರಿ ಹಾಕುತ್ತಿದೆ. ಇದರಿಂದ ಕಾರ್ಮಿಕರು ಹತಾಶೆಗೊಂಡಿದ್ದಾರೆ. ಆದರೆ ಓರ್ವ ಕಾರ್ಮಿಕ ಮಾತ್ರ ತನಗಾದ ಅನ್ಯಾಯದ ವಿರುದ್ಧ ತಿರುಗಿಬಿದ್ದಿದ್ದು, ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ. ಇಂದು ಕೆಲಸ ಕಳೆದುಕೊಂಡ ಕಿಚಡಿ ಪ್ರಕಾಶ್ ಎಂಬ ಕಾರ್ಮಿಕ ಪ್ರತಿಭಟನೆ ನಡೆಸುತ್ತುದ್ದು, ಜಿಂದಲ್ ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಿಚಡಿ ಪ್ರಕಾಶ್ ಜಿಂದಾಲ್ ಕಂಪನಿಯಲ್ಲಿ ಕಳೆದ 5 ವರ್ಷಗಳಿಂದ ಜಇ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಇದ್ದಕ್ಕಿದ್ದ ಹಾಗೆ ಕೆಲಸದಿಂದ ಕಿತ್ತು ಹಾಕಿರುವುದರಿಂದ ಹತಾಶರಾಗಿದ್ದಾರೆ. ಇನ್ನೂ ಕೆಲಸದಿಂದ ತೆಗೆದುಹಾಕಲು ನಷ್ಟ, ಕೆಲಸದಲ್ಲಿ ತೃಪ್ತಿಯಿಲ್ಲ ಎಂಬ ನೆಪ ಹೇಳುತ್ತಿದ್ದಾರೆ. ಅಲ್ಲದೇ 50 ವರ್ಷ ಮೇಲ್ಪಟ್ಟವರನ್ನು ಕಾರಣವೇ ಇಲ್ಲದೆ ಕೆಲಸದಿಂದ ತೆಗೆದುಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಪ್ರಕಾಶ್. ಹೀಗಾಗಿ ಜಿಂದಾಲ್ ಕಾರ್ಖಾನೆ ಆಡಳಿತ ವರ್ಗದ ನಡೆ ಖಂಡಿಸಿ ಧರಣಿ ಕುಳಿತಿದ್ದಾರೆ. ಇನ್ನೂ ಸ್ಥಳಕ್ಕೆ ಪೊಲೀಸರು ಮತ್ತು ಜಿಂದಾಲ್ ಸಿಬ್ಬಂದಿ ದೌಡಾಯಿಸಿ ಧರಣಿ ಕೈಬಿಡುವಂತೆ ನೌಕರನ ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ.