ಪಡಿತರ ಚೀಟಿದಾರರಿಗೆ E-KYC ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಲಾಗಿದೆ. ಡಿಸೆಂಬರ್ 1, 2024 ಈ ಪ್ರಕ್ರಿಯೆಗಾಗಿ ಕೊನೆಯ ದಿನವಾಗಿದೆ. ಈ ದಿನಾಂಕದೊಳಗೆ E-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ರೇಷನ್ ಕಾರ್ಡ್ ಅಮಾನ್ಯವಾಗುವ ಸಾಧ್ಯತೆಯಿದೆ.
E-KYC ಪ್ರಕ್ರಿಯೆ ಹೇಗೆ ಮಾಡಿಸಬೇಕು?
1. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ.
2. ನಿಮ್ಮ ಬೆರಳಚ್ಚು (ಬಯೋಮೆಟ್ರಿಕ್) ಪ್ರಕ್ರಿಯೆ ಮೂಲಕ E-KYC ದೃಢೀಕರಿಸಿ.
3. ಈ ಸೇವೆ ಉಚಿತವಾಗಿದೆ,ಯಾವುದೇ ಶುಲ್ಕ ಪಾವತಿಸುವಂತಿಲ್ಲ ತಿಳಿದಿರಲಿ
ಪ್ರಕ್ರಿಯೆ ವಿಳಂಬ ಮಾಡಿದರೆ ಪಡಿತರ ಸೌಲಭ್ಯವನ್ನು ಕಳೆದುಕೊಳ್ಳುವ ಸಂಭವವಿದೆ.
ಈಗಲೇ ನಿಮ್ಮ ಖಾತೆಯ ಪರಿಶೀಲನೆ ಮಾಡಿಸಿ.