ಬೆಂಕಿ ಜತೆ ಆಟ ಆಡಬೇಡಿ ‘ದೀದಿ’ : ಪಶ್ಚಿಮ ಬಂಗಾಳದ ರಾಜ್ಯಪಾಲರ ವಾರರ್ನಿಂಗ್ !
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲಿನ ಕಲ್ಲು ತೂರಾಟ ಪ್ರಕರಣ ಸಂಬಂಧ ಪಶ್ವಿಮ ಬಂಗಾಳದ ಸಿಎಂ ಬಬತಾಬ್ಯಾನರ್ರ್ಜಿ ವಿರುದ್ಧ ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಜಗದೀಪ್ ಧನ್ಖಡ್ ಸಹ ದೀದಿ ವಿರುದ್ಧ ಗುಡುಗಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿ ಬೆಂಕಿ ಜೊತೆ ಆಟ ಆಡಬೇಡಿ ಎಂದು ಮಮತಾ ಬ್ಯಾನರ್ಜಿಗೆ ವಾರ್ನ್ ಮಾಡಿದ್ದಾರೆ.
ನಾನು 10 ಮಹಿಳೆಯರಿಗೆ ಸೇರಿದವನು : ಪತ್ನಿಗೆ ಶಾಕ್ ಕೊಟ್ಟ ಪತಿರಾಯ ಮಾಡಿದ್ದೇನು ಗೊತ್ತಾ..!
ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಕಾನೂನು, ಸುವ್ಯವಸ್ಥೆ ಉಲ್ಲಂಘಿಸಿದವರಿಗೆ ಪೊಲೀಸರ, ಆಡಳಿತಗಾರರ ರಕ್ಷಣೆಯಿದೆ. ಅದರಿಂದಾಗಿಯೇ ಇಂತಹ ಸಮಾಜಘಾತುಕ ಕೃತ್ಯವೆಸಗಲು ಧೈರ್ಯ ಬರುತ್ತದೆ. ಯಾರು ಹೊರಗಿನವರು, ಯಾರು ಒಳಗಿನವರು ಎಂಬ ಮೊಂಡು ವಾದದಿಂದ ಮುಖ್ಯಮಂತ್ರಿಗಳು ಹಿಂದೆ ಸರಿಯಬೇಕು.
ಸದ್ಯ ನಡೆದಿರುವ ಘಟನೆಗಳು ದುರದೃಷ್ಟಕರ. ಸಿಎಂ ಸಂವಿಧಾನಕ್ಕೆ ಗೌರವ ನೀಡಿ, ಅದರಂತೆ ನಡೆದುಕೊಳ್ಳಬೇಕಿದೆ. ಇನ್ನೂ ಈ ಘಟನೆ ಬಗ್ಗೆ ಜನರ ಬಳಿ ಮಮತಾ ಬ್ಯಾನರ್ಜಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ಧಾರೆ. ಮುಂದುವರೆದು ಮಾತನಾಡಿರೋ ಅವರು ರಾಜ್ಯದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ದಾಳಿ ಸಂಬಂಧ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಅದರ ವಿಷಯಗಳನ್ನು ಕೆಲ ಗೌಪ್ಯ ಕಾರಣಗಳಿಂದ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಅಂದ್ಹಾಗೆ ಕೋಲ್ಕತಾದಿಂದ ಡೈಮಂಡ್ ಹಾರ್ಬರ್ಗೆ ತೆರಳುವ ಮಾರ್ಗ ಮಧ್ಯೆ ಜೆಪಿ ನಡ್ಡಾ ಅವರ ಕಾರಿನ ಮೇಲೆ ಕೆಲ ಆಘಂತುಕರು ಕಲ್ಲು ತೂರಾಟ ನಡೆಸಿದ್ದು, ಈ ವಿಚಾರವಾಗಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಜರು ದೀದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel