ಬ್ರಿಟನ್ ರಾಣಿಯಾಗಿ ವೇಲ್ಸ್ ರಾಜಕುಮಾರಿ ಕೆಮಿಲಾ ಅಧಿಕಾರಕ್ಕೆ
70 ವರ್ಷಗಳ ಕಾಲ ಬ್ರಿಟಿಷ್ ರಾಣಿಯಾಗಿ ರಾಜ್ಯಭಾರ ನಡೆಸಿದ್ದ ಎಲಿಜಬೆತ್ ತನ್ನ ಮಗ ಚಾರ್ಲ್ಸ್ ಹೆಸರನ್ನ ಇಂಗ್ಲೆಂಡ್ ನ ಮುಂದಿನ ರಾಜ ಎಂದು ಘೋಷಿಸಿದ್ದಾರೆ. ಈ ಮೂಲಕ ಅವರ ಪತ್ನಿ ಕ್ಯಾಮಿಲ್ಲಾ ಬ್ರಿಟನ್ ನ ಮುಂದಿನ ರಾಣಿಯಾಗಲಿದ್ದಾರೆ.
ರಾಜಕುಮಾರ ಚಾರ್ಲ್ಸ್ ಪಟ್ಟಕ್ಕೇರಿದ ನಂತರ ಡಚ್ಚಸ್ ಆಫ್ ಕಾರ್ನ್ ವಾಲಿಸ್ ಆಗಿ ಕೆಮಿಲಾ ರಾಣಿಯಾಗಿ ಆಯ್ಕೆ ಆಗಿದ್ದಾರೆ… ಈ ಕುರಿತು ಖುದ್ದು ಎರಡನೇ ಎಲಿಜಬತ್ ಅವರು ಘೋಷಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ನೀವೆಲ್ಲರೂ ನೀಡಿರುವ ಸಹಕಾರಕ್ಕೆ ಧನ್ಯವಾದಗಳು. ನೀವು ತೊರಿರುವ ಪ್ರೀತಿ ಮತ್ತು ನಿಷ್ಟೆಗೆ ಅಭಾರಿಯಾಗಿದ್ದೇನೆ. ಇದೇ ರೀತಿ ಪೂರ್ಣ ಸಹಕಾರ ನನ್ನ ಮಗ ಚಾರ್ಲ್ ಮತ್ತು ಸೊಸೆ ಕೆಮಿಲಾ ಮೆಲೂ ಇರಲಿ ಎಂದಿದ್ದಾರೆ.
25 ನೇ ವಯಸ್ಸಿನಲ್ಲಿ ಸಿಂಹಾಸನವೇರಿದರು.
ಫೆಬ್ರವರಿ 6, 1952 ರಂದು ಎಲಿಜಬತ್ ಅವರನ್ನ ಸಿಂಹಾಸನದಲ್ಲಿ ಕೂರಿಸಲಾಯಿತು. ಇಂದು ಅದರ 70 ನೇ ವಾರ್ಷಿಕೋತ್ಸವ. 70 ವರ್ಷಗಳ ಹಿಂದೆ ತಂದೆ ಕಿಂಗ್ ಜಾರ್ಜ್ VI ಇದ್ದಕ್ಕಿದ್ದಂತೆ ನಿಧನರಾಗಿದ್ದರು. ಆ ಸಮಯದಲ್ಲಿ ಎಲಿಜಬೆತ್ ಕೇವಲ 25 ವರ್ಷ ವಯಸ್ಸಾಗಿತ್ತು.