‘ಮಿಸ್ ಇಂಡಿಯಾ ಸೌತ್’ ದಿವ್ಯಾ ಕಾಲೇಜಿನ ದಿನಗಳಲ್ಲಿ ಬಾಡಿ ಶೇಮಿಂಗ್ ಗೆ ಒಳಗಾಗಿದ್ದರಂತೆ..!

1 min read

‘ಮಿಸ್ ಇಂಡಿಯಾ ಸೌತ್’ ದಿವ್ಯಾ ಕಾಲೇಜಿನ ದಿನಗಳಲ್ಲಿ ಬಾಡಿ ಶೇಮಿಂಗ್ ಗೆ ಒಳಗಾಗಿದ್ದರಂತೆ..!

ಬಿಗ್ ಬಾಸ್ ಕನ್ನಡ ಸಿಸನ್ 8 ರಲ್ಲಿ ಗಲಾಟೆ, ಗದ್ದಲ, ಎಲಿಮೇಶನ್ ಗೆ ನಾಮಿನೇಷನ್ , ಟಾಸ್ಕ್ ಗಳಳು ಎಲ್ಲಲವೂ ಶುರುವಾಗಿದೆ. ಇದೇ ರೀತಿ ಬಿಗ್ ಬಾಸ್ ಸ್ಪರ್ಧಿಗಳಿಗೆ ತಮ್ಮ ಜೀವನದ  ಅನುಭವ ಬಿಚ್ಚಿಡುವ ಟಾಸ್ಕ್ ನೀಡಿತ್ತು. ಈ ವೇಳೆ ತಮ್ಮ ಕಾಲೇಜಿನ ದಿನಗಳನ್ನ ನೆನೆದು ದಿವ್ಯಾ ಸುರೇಶ್ ಕಣ್ಣೀರಿಟ್ಟಿದ್ದಾರೆ.

ದೊಡ್ಮನೆಯಲ್ಲಿ ಕಮಾಲ್ ಮಾಡ್ತಾರಾ ಶಿವಮೊಗ್ಗದ ಬೆಡಗಿ ದಿವ್ಯ ಉರುಡುಗ..!

ಹೌದು ಈ ಮಾಡೆಲ್ ಆಗಿ ಸ್ಟೈಲಿಶ್ ಆಗಿ ಬೋಲ್ಡ್ ಆಗಿ ಗುರುತಿಸಿಕೊಂಡಿರುವ ದಿವ್ಯ ಒಂದೊಮ್ಮೆ ಬಾಡಿ ಶೇಮಿಂಗ್ ಗೆ ಒಳಗಾಗಿದ್ದರಂತೆ. ಡಿಗ್ರಿ ಲೈಫ್ ನ ದಿನಗಳಲ್ಲಿ ಅವರ ಡ್ರೆಸ್ಸಿಂಗ್ ಸೆನ್ಸ್ ನೋಡಿ ಆಡಿಕೊಳ್ತಿದ್ದರಂತೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಎಲ್ಲರೂ ರೇಗಿಸುತ್ತಿದ್ದರು ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ ದಿವ್ಯ. ಡಿಗ್ರಿ ಮಾಡುವಾಗ ಅವರು ಬಹಳ ಮುಗ್ದ ರೀತಿಯಲ್ಲಿದ್ದರಂತೆ. ತಲೆಗೆ ಎಣ್ಣೆ ಹಾಕಿಕೊಂಡು ಚೂಡಿದಾರ್ ಧರಿಸಿ ಕಾಲೇಜ್ಗೆ ಹೋಗ್ತಿದ್ದರಂತೆ. ಆದ್ರೆ ಕೆಲವರು ಇದಕ್ಕಾಗಿ ಅವರನ್ನ ಅಪಹಾಸ್ಯ ಮಾಡುತ್ತಿದ್ದಂತೆ. ಅಲ್ದೇ ಈಕೆ ತುಂಬಾ ಎತ್ತರ ಇದ್ದಾಳೆ, ಚೂಡಿದಾರ್ ಹಾಕೊಕೊಂಡು ಬರ್ತಾಳೆ ಅಂದಿದ್ದವರು ಈಗ ನನ್ನನ್ನು ನೋಡಿ ತುಂಬಾ ಚೆನ್ನಾಗಿದ್ದಾಳೆ ಅಂತಾರೆ. ದಯವಿಟ್ಟು ಯಾರಿಗೂ ಬಾಡಿ ಶೇಮಿಂಗ್ ಮಾಡಬೇಡಿ ಎಂದು ಕಣ್ಣೀರಿಟ್ಟಿದ್ದಾರೆ. ಇತ್ತ ಮನೆಯಲ್ಲಿದ್ದ ಉಳಿದ ಸ್ಪರ್ಧಿಗಳು ದಿವ್ಯಾ ಕಥೆ ಕೇಳಿ ಭಾವುಕರಾಗಿ ದಿವ್ಯಾಗೆ ಚಪ್ಪಾಳೆಗಳ ಮೂಲಕ ಚೀರ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೋರಾಟ ಮುಂದುವರೆಸ್ತಾರಾ ಪ್ರಶಾಂತ್ ಸಂಬರಗಿ..!

ಕಾಲೇಜ್ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ದಿವ್ಯಾ ಸುರೇಶ್ ಮಾಡಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು. 2017ರಲ್ಲಿ ನಡೆದ ಸೌತ್ ಇಂಡಿಯಾ ಮಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್ ಆಗಿ ಹೊರಹೊಮ್ಮಿದ್ದರು. ಅದಾದ ಬಳಿಕ ಕನ್ನಡ-ತೆಲುಗು ಚಲನಚಿತ್ರಗಳಲ್ಲಿ ನಟಿಸಿದರು. ಜೊತೆಗೆ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ ಬಿಗ್ ಬಾಸ್ ನ ಸ್ಪರ್ಧಿ ಕಮಿಡಿಯನ್ ರಘು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd