ಮೈಸೂರು – ವಿಶ್ವ ಯೋಗ ದಿನದ ಪೂರ್ವಭ್ಯಾಸಕ್ಕೆ ದೇಶಿಕೇಂದ್ರ ಸ್ವಾಮೀಜಿ ಚಾಲನೆ…
ಜೂನ್ 21ರಂದು ವಿಶ್ವ ಯೋಗ ದಿನ ಆಚರಣೆ ಹಿನ್ನಲೆ ಯೋಗ ಪೂರ್ವಾಭ್ಯಾಸ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿಂದು ಜಗದ್ಗುರು ದೇಶಿಕೇಂದ್ರ ಮಹಾಸ್ವಾಮೀಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯೋಗ, ಭಾರತ ಜಗತ್ತಿಗೇ ನೀಡಿರುವ ಅಪೂರ್ವ ಕೊಡುಗೆಯಾಗಿದ್ದು, ಯೋಗಾಭ್ಯಾಸದಿಂದ ಶರೀರ ಹಾಗೂ ಮಾನಸ್ಸು ಸದಾ ಸ್ವಸ್ಥವಾಗಿರಲು ನೆರವಾಗುತ್ತದೆ ಎಂದು ಜಗದ್ಗುರು ದೇಶಿಕೇಂದ್ರ ಮಹಾಸ್ವಾಮೀಜಿ, ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಕೈ ಗೊಳ್ಳಲಾಗಿದ್ದು, ಜೂನ್ 21ರಂದು ಚಾಮುಂಡಿ ಬೆಟ್ಟ, ಸುತ್ತೂರು ಮಠ, ಅರಮನೆ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸದ ಪ್ರತಾಪ್ ಸಿಂಹ, ಮಾಹಿತಿ ನೀಡಿದರು. ಇದೇ ವೇಳೆ ಸುಮಾರು 10 ಸಾವಿರ ಯೋಗಪಟುಗಳು ಏಕಕಾಲದಲ್ಲಿ ಯೋಗ ಪೂರ್ವಾಭ್ಯಾಸದಲ್ಲಿ ಪಾಲ್ಗೊಂಡರು.