ಯೋಗಿ ಆದಿತ್ಯನಾಥ್ ಕಾರ್ಯಕ್ರಮಕ್ಕೆ ರಿವಲ್ವಾರ್ ಸಮೇತ ನುಗ್ಗಿದ ವ್ಯಕ್ತಿ – ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು
ಉತ್ತರಪ್ರದೇಶ : ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದ ಕಾರ್ಯಕ್ರಮೊಂದಕ್ಕೆ ವ್ಯಕ್ತಿಯೋರ್ವ ರಿವಲ್ವಾರ್ ಸಮೇತ ನುಸುಳಿದ್ದ ಪರಿಣಾಮ , ಕರ್ತವ್ಯ ಲೋಕದಿಂದಾಗಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ. ಬಸ್ತಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದ ಸ್ಥಳಕ್ಕೆ ಸಿಎಂ ಯೋಗಿ ಬರುವ ಮುಂಚೆಯೇ ವ್ಯಕ್ತಿಯೊಬ್ಬ ಪರವಾನಗಿ ಪಡೆದ ಗನ್ ಹಿಡಿದು ಒಳನುಸುಳಿದ್ದ. ಗನ್ ಹಿಡಿದ ವ್ಯಕ್ತಿಯನ್ನು ಆಡಿಟೋರಿಯಂ ಒಳಗೆ ಕಂಡಕೂಡಲೇ ಆತನನ್ನು ತಕ್ಷಣ ಅಲ್ಲಿಂದ ಭದ್ರತಾ ಸಿಬ್ಬಂದಿ ದೂರ ಕರೆದೊಯ್ದಿದ್ದಾರೆ. ಇದನ್ನು ಬಹುದೊಡ್ಡ ಭದ್ರತಾ ಲೋಪ ಎಂದು ಪರಿಗಣಿಸಿರುವ ಸರ್ಕಾರ ನಾಲ್ವರು ಪೋಲಿಸ್ ಸಿಬ್ಬಂದಿಯನ್ನು ಅಮಾನತು ಮಾಡಿದೆ.
ಬಸ್ತಿ ಜಿಲ್ಲೆಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ಇತರೆ ಠಾಣೆಯ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ಬರುವ ಮುಂಚೆಯೇ ಅದೇ ಜಿಲ್ಲೆಯ ಗೌರ್ ಬ್ಲಾಕ್ ಪ್ರತಿನಿಧಿ ಜಾತ್ಶಂಕರ್ ಶುಕ್ಲ ಎಂಬಾತ ಆಡಿಟೋರಿಯಂನಲ್ಲಿದ್ದ.