ರಾಜ್ಯದಲ್ಲಿ ಇದೆಯಂತೆ 19 ರಾಜಕಾರಣಿಗಳ `ಆ’ ಸಿಡಿ

1 min read
Ramesh jarakiholi

ರಾಜ್ಯದಲ್ಲಿ ಇದೆಯಂತೆ 19 ರಾಜಕಾರಣಿಗಳ `ಆ’ ಸಿಡಿ

ಬಳ್ಳಾರಿ : ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ರಾಜ್ಯದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಆಫ್ ಲೈನ್… ಆನ್ ಲೈನ್ ನಲ್ಲಿ ರಮೇಶ್ ಜಾರಕಿಹೊಳಿ ಕಾಮಕಾಂಡ ಕುರಿತ ಚರ್ಚೆ ಜೋರಾಗಿದೆ. ಈ ಮಧ್ಯೆ ಇಂತಹ ಇನ್ನಷ್ಟು ಮಂದಿಯ ವಿಡಿಯೋಗಳು ಇವೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಹಿಂದೆ ಅವರ ಮಾನ ಮರ್ಯಾದೆ ತೆಗೆಯೋ ಹುನ್ನಾರ ಇದೆ. ಸಿಡಿಯಲ್ಲಿ ವಿಡಿಯೋ ಹಾಗೂ ವಾಯ್ಸ್ ಗೆ ಲಿಂಕ್ ಇಲ್ಲ. ಈ ಸಿಡಿ ಹಳೆಯದು, ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.

CD

ಇನ್ನು ಇಲ್ಲಿವರೆಗೂ ಸಂತ್ರಸ್ತರು ದೂರು ನೀಡಿಲ್ಲ. ಆ ಮಹಿಳೆ ನಿಜವಾದ ಸಂತ್ರಸ್ತೆಯಾಗಿದ್ರೆ, ದೂರು ನೀಡ್ತಿದ್ರು. ರಾಜ್ಯದಲ್ಲಿ ಈ ರೀತಿ ಸಿಡಿ ಮಾಡುವ ಗ್ಯಾಂಗ್ ಒಂದು ಸಕ್ರಿಯವಾಗಿ ಕಾರ್ಯ ಮಾಡ್ತಿದೆ. ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.

ಒಬ್ಬ ಮಾಜಿ ಮುಖ್ಯ ಮಂತ್ರಿಗಳು ವಹಿನಾಡಿಗೆ ಹೊಗ್ತಾರೆ..! ಅವರು ಇದೇ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅಲ್ಲಿಗೆ ಹೊಗ್ತಾರೆ. ಆ ಮಾಜಿ ಸಿಎಂ ವೈನಾಡಿನಲ್ಲಿರೋ ಅಲ್ಲಿರೋ ರೆಸಾರ್ಟ್ ಗೆ ಹೋಗ್ತಾರೆ. ಇನ್ನೂ 19 ದೊಡ್ಡ ವ್ಯಕ್ತಿಗಳ ಸಿಡಿಗಳು ಇವೆ, ಅವುಗಳನ್ನ ಇಟ್ಟುಕೊಂಡು ಕೆಲವರು ಆಟ ಆಡ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd