ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕರಾವಳಿ ಸೇರಿದಂತೆ ಮಲೆನಾಡು, ಉತ್ತರ ಒಳನಾಡಿನಲ್ಲಿಯೂ ವರುಣ ಅಬ್ಬರಿಸಿದ್ದಾನೆ. ಇನ್ನೂ ಒಂದು ವಾರದ ಕಾಲ ಮಳೆ ಹೀಗೆ ಮುಂದುವರಿಯುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ತಿಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೂ ಸಿಲಿಕಾನ್ ಸಿಟಿಯಲ್ಲೂ ವರುಣಾರ್ಭಟಕ್ಕೆ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಸುಂಕದಕಟ್ಟೆ , ನೆಲಮಂಗಲ, ಬ್ಯಾಡರಹಳ್ಳಿ, ಅಂಜನಾನಗರ, ಕೊಟ್ಟಿಗೆಪಾಳ್ಯ ಸೇರಿದಂತೆ ಹಲವೆಡೆ ವರುಣರಾಯ ಅಬ್ಬರಿಸಿದ್ದಾನೆ. ಮಳೆ 1 ವಾರದ ವರೆಗೂ ಮಳೆ ಹೀಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!
ಚೋಕರ್ಸ್ ಅಲ್ಲ... ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..! ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ...