ವೈಕುಂಠ ಏಕಾದಶಿಯಂದು ಸಂಕಷ್ಟನಾಶನ ವಿಷ್ಣು ಸ್ತೋತ್ರಮ್ ಅರ್ಥ ಸಹಿತ ವಿವರಣೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಶ್ರೀ ಗಣೇಶಾಯ ನಮ:|
ನಾರದ ಉವಾಚ:-
ಪುನರ್ದೈತ್ಯಂ ಸಮಾಯಾಂತಂ ದೃಷ್ಟ್ವಾ ದೇವಾ: ಸವಾಸವಾ: |
ಭಯಪ್ರಕಂಪಿತಾ: ಸರ್ವೆ ವಿಷ್ಣುಂ ಸ್ತೋತುಂ ಪ್ರಚಕ್ರಮು: ||೧||
ಭಾವಾರ್ಥ:-ನಾರದರು ಹೇಳಿದರು:-
ಪುನ: ಬರುತ್ತಿರುವ ದೈತ್ಯರನ್ನು ಕಂಡು ಇಂದ್ರನೊಟ್ಟಿಗೆ ದೇವತೆಯರೆಲ್ಲರೂ ಭೀತಿಗೊಳಗಾಗಿ ವಿಷ್ಣುವನ್ನು ಸ್ತುತಿಸಲು ಪ್ರಾರಂಬಿಸಿದರು.
ದೇವಾ ಊಚು:-
ನಮೋ ಮತ್ಸ್ಯಕೂರ್ಮಾದಿ ನಾನಾ ಸ್ವರೂಪೈ: ಸದಾಭಕ್ತ ಕಾರ್ಯೋದ್ಯತಾಯಾರ್ತಿಹಂತ್ರೇ |
ವಿಧಾತ್ರಾದಿ ಸರ್ಗಸ್ಥಿತಿಧ್ವಂಸಕರ್ತೆ ಗದಾಶಂಖಪದ್ಮಾದಿ ಹಸ್ತಾಯ ತೇಸ್ತು ||೨||
ಭಾವಾರ್ಥ:-ದೇವತೆಗಳು ಹೇಳುವರು:-
ಮತ್ಸ್ಯ-ಕೂರ್ಮ ಮೊದಲಾದ ನಾನಾಸ್ವರೂಪಗಳಿಂದ ಸಮಸ್ತಕಾಲವೂ ಭಕ್ತರ ಕಾರ್ಯಗಳಲ್ಲಿ ನಿರತನಾಗಿ ಅವರ ದುರಭಿಮಾನವನ್ನು ಅಳಿಸಿ ಉತ್ಪತ್ತಿ,ಸ್ಥಿತಿ,ಮತ್ತು ನಾಶಗಳಿಗೆ ಸ್ವಾಮಿಯಾದವನೂ,ಕೈಗಳಲ್ಲಿ ಗದೆ,ಶಂಖ,ಪದ್ಮ,ಚಕ್ರಗಳನ್ನು ಹಿಡಿದಿರುವವನೂ ಆಗಿರುವ ವಿಷ್ಣುವೇ ನಿನಗೆ ಪ್ರಣಾಮಗಳು.
ರಮಾವಲ್ಲಭಾಯಾಸ್ಸುರಾಣಾಂ ನಿಹಂತ್ರೇ ಭುಜಂಗಾರಿಯಾನಾಯ ಪೀತಾಂಬರಾಯ |
ಮಖಾದಿಕ್ರಿಯಾಪಾಕಕರ್ತ್ರೆ ವಿಕರ್ತ್ರೆ ಶರಣ್ಯಾಯ ತಸ್ಮೈ ನತಾ: ಸ್ಮೋ ನತಾ ಸ್ಮ: ||೩||
ಭಾವಾರ್ಥ:-ರಮಾವಲ್ಲಭನಿಗೆ,ಅಸುರ ಸಂಹಾರಕನಿಗೆ,ಗರುಢವಾಹನನಿಗೆ,ಪೀತಾಂಬರಧಾರಿಗೆ,ಯಜ್ಞಾದಿ ಕಾರ್ಯಗಳ ಪ್ರತಿಫಲದಾಯಕನಿಗೆ,ಶರಣರನ್ನು ರಕ್ಷಿಸುವವನಿಗೆ ನಾವು ನಮಸ್ಕರಿಸುವೆವು.
ನಮೋ ದೈತ್ಯಸಂತಾಪಿತಾಮರ್ತೃ ದು:ಖಾಚಲ ಧ್ವಂಸದಂಭೋಲಯೇ ವಿಷ್ಣವೇ ತೇ |
ಭುಜಂಗೇಶತಲ್ಪೇಶಯಾರ್ಕ ಚಂದ್ರ ದ್ವಿನೇತ್ರಾಯ ತಸ್ಮೈ ನತಾ: ಸ್ಮೋ ನತಾ ಸ್ಮ: ||೪||
ಭಾವಾರ್ಥ:-ದೈತ್ಯರ ಉಪಟಳದಿಂದ ಕ್ಷೋಭೆಗೊಳಗಾದ,ಮರ್ತ್ಯರ ದು:ಖವೆಂಬ ಅತ್ಯುನ್ನತಪ್ರದೇಶವನ್ನು ನಾಶಗೊಳಿಸುವ,ಗರ್ವಗಳಿಗೆ ಲಯಕಾರಿಯಾಗಿರುವ ವಿಷ್ಣುವೇ;ಶೇಷಶಾಯಿಯೇ;ಸೂರ್ಯ-ಚಂದ್ರರನ್ನು ಕಣ್ಣುಗಳನ್ನಾಗಿ ಮಾಡಿಕೊಂಡಿರುವವನೇ ನಿನಗೆ ನಮಸ್ಕರಿಸುವೆವು.
|| ಇತಿ ಸಂಕಷ್ಟನಾಶನ ವಿಷ್ಣುಸ್ತೋತ್ರಮ್ ||
|| ಈ ರೀತಿಯಾಗಿ ಸಂಕಷ್ಟ ನಾಶನ ವಿಷ್ಣುಸ್ತೋತ್ರಗಳ ಭಾವಾರ್ಥವು ||
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564







