ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಖಾಸಗಿ ಆಸ್ಪತ್ರೆಗಳ ನೆರವನ್ನೂ ಕೇಳಿದ್ದು, ಎಲ್ಲಾ ಆಸ್ಪತ್ರೆಗಳಲ್ಲೂ ಶೇ 50ರಷ್ಟ ಹಾಸಿಗೆಗಳನ್ನು ಮೀಸಲಿಡುವಂತೆ ಆದೇಶಿಸಿತ್ತು. ಆದರೆ ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡದೇ ನಿರ್ಲಕ್ಷ್ಯ ವಹಿಸಿದ ಬೆಂಗಳೂರಿನ 5 ಆಸ್ಪತ್ರೆಗಳ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿಯೇ ಈಗಾಗಲೇ 5 ಆಸ್ಪತ್ರೆಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ನೃಪತುಂಗಾ ರಸ್ತೆಯಲ್ಲಿರುವ ಸೇಂಟ್ ಮಾರ್ಥಾನ್ ಆಸ್ಪತ್ರೆ, ಶಂಕರಪುರದ ರಂಗದೊರೆ ಮೆಮೋರಿಯಲ್ ಆಸ್ಪತ್ರೆ, ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆ, ಕನ್ನಿಂಗ್ ಹ್ಯಾಂ ರಸ್ತೆಯ ಪೋರ್ಟೀಸ್ ಆಸ್ಪತ್ರೆ ಹಾಗೂ ದೇವರಬೀಸನಹಳ್ಳಿಯ ಸಕ್ರಾ ಆಸ್ಪತ್ರೆ ವಿರುದ್ಧ ದೂರು ದಾಖಲಾಗಿದೆ. ಜೂ. 23 ರಿಂದ ಜು. 29 ರವರೆಗೆ ಅವಧಿಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಬೆಡ್ ಗಳ ವಿವರ ಕೇಳಿದ್ದ ವೇಳೆ ಮಾಹಿತಿ ನೀಡಲು ಆಸ್ಪತ್ರೆಯ ಮುಖ್ಯಸ್ಥರು ನಿರಾಕರಿಸಿದ್ದಾರೆ. ಹೀಗಾಗಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಹಿನ್ನಲೆ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ದೂರು ದಾಖಲಾಗಿದೆ.
Astrology : ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.
ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ. ದಿನವಿಡೀ ಕಷ್ಟಪಟ್ಟು ದುಡಿದು ಮನೆಗೆ ಬಂದವರು ನೆಮ್ಮದಿಯಿಲ್ಲದೆ,...