ಹಿರಿಯ ನಟ ಜಗ್ಗೇಶ್ ಗೆ ಅವಮಾನ : ಒಳ್ಳೆ ಹುಡುಗ ಪ್ರಥಮ್ ಆಕ್ರೋಶ..!

1 min read

ಹಿರಿಯ ನಟ ಜಗ್ಗೇಶ್ ಗೆ ಅವಮಾನ : ಒಳ್ಳೆ ಹುಡುಗ ಪ್ರಥಮ್ ಆಕ್ರೋಶ..!

ನವರಸನಾಯಕ ಜಗ್ಗೇಶ್ ಚಿತ್ರೀಕರಣದಲ್ಲಿ ಬಾಗಿಯಾಗಿದ್ದಾಗಲೇ ದರ್ಶನ್ ಅಭಿಮಾನಿಗಳು ಬಂದು ಜಗ್ಗೇಶ್ ಅವರ ಜೊತೆಗೆ ಗಲಾಟೆ ಮಾಡಿ ಅವಮಾನ ಮಾಡಿದ್ದ ಘಟನೆಯನ್ನ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಥಮ್, ‘ಜಗ್ಗೇಶ್ ಸರ್ ಅಷ್ಟು ವಿನಮ್ರವಾಗಿ ನಾನು ಹೇಳಿಲ್ಲ ಅಂತ ಕೇಳಿಕೊಳ್ಳುತ್ತಿದ್ದರೂ ಕನಿಷ್ಟ ಅವರ ಹಿರಿತನಕ್ಕಾದರೂ ಗೌರವ ಕೊಡಬೇಕಿತ್ತು’. ಈಗಿನ ಕುಲಗೆಟ್ಟ ಮುಂದುವರೆದ ತಂತ್ರಜ್ಞಾನದಲ್ಲಿ ಆಡಿಯೋ ಎಡಿಟ್ ಮಾಡಿ ತಿರುಚೋದು ದೊಡ್ಡ ವಿಚಾರನಾ? ಒಂದು ವೇಳೆ ಆಕಸ್ಮಾತ ಜಗ್ಗೇಶ್ ಅವರು ಏನಾದ್ರೂ ಹಾಗೆ ಹೇಳಿಲ್ಲದಿದ್ರೆ ಇವತ್ತಿನ ಅಗೌರಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.

ಅಂದ್ಹಾಗೆ ಇತ್ತೀಚೆಗೆ ನಟ ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು. ಇದೇ ವಿಚಾರವಾಗಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ವೇಳೆ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರನ್ನ ಘೇರಾವ್ ಹಾಕಿ ಗಲಾಟೆ ಮಾಡಿದ್ದರು. ಇನ್ನೂ ಇದೇ ವಿಚಾರವಾಗಿ ಬೇಸರ ಹೊರಹಾಕಿರುವ ಜಗ್ಗೇಶ್, ಆತ್ಮೀಯರೆ ನನಗೆ ನೀವು ನಿಮಗೆ ನಾನು, ಇನ್ನು ಮುಂದಿನ ದಿನಗಳಲ್ಲಿ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಟಿವಿ ಶೋಗಳಿಗೆ ಮಾತ್ರ ಬದುಕು ಮೀಸಲು ಇಡುತ್ತೇನೆ. ತುಂಬ ತಾಮಸವಾಗಿದೆ ನನಗೆ ನಮ್ಮರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ಅಂತ ಬರೆದುಕೊಂಡಿದ್ದಾರೆ.

ಇದಲ್ಲದೇ ಟ್ವಿಟ್ಟರ್ ಲೈವ್ ನಲ್ಲಿ ಜಗ್ಗೇಶ್ ಅವರು, ಒಂದು ವಿಷಯವನ್ನು ಇಟ್ಟುಕೊಂಡು ನನಗೆ ಬೇಸರ ಮಾಡುತ್ತಿದ್ದಾರೆ. ಸಣ್ಣ ವಿಷಯವನ್ನು ಇಟ್ಟುಕೊಂಡು ನೋವು, ಅಪಮಾನವನ್ನು ಮಾಡಿದರೆ ನನಗೆ ಯಾವುದೇ ನಷ್ಟವಿಲ್ಲ. ನಾನು ಕಳ್ಳತನ, ರಾಬರಿ ಮಾಡಿದ್ದೀನಾ? ಹೆದರಿ ಕೂತಿದೀನಾ? ನಿನ್ನೆ ಬಂದಿರುವವರ ಜೊತೆಯಲ್ಲಿ ಅವರೊಂದಿಗೆ ಕೂತು ಮಾತನಾಡಿದ್ದೇನೆ. ಖಾಸಗಿ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವ ಹಾಗೆ ಆಗಿದೆ. ಹಾಗಂತ ನಾನು ಹೆದರಿ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ.

ಪೊಗರು ಪ್ರಚಾರ ಮಾಡದೇ ಅಸಡ್ಡೆ ತೋರಿದ ರಶ್ಮಿಕಾ ವಿರುದ್ಧ ಕನ್ನಡಿಗರ ಆಕ್ರೋಶ..!


ನಾನು ಸಿನಿಮಾ ರಂಗಕ್ಕೆ ಬಂದು 40 ವರ್ಷ ಆಗಿದೆ. ರಾಜ್ ಕುಮಾರ್, ವಿಷ್ಣುವರ್ಧನ್, ಪ್ರಭಾಕರ್ ಅವರ ಜೊತೆಗೆ ಹೆಜ್ಜೆ ಹಾಕುತ್ತಾ ಬಂದಿರುವನು ನಾನು. ನಾನು ಸ್ವಾಭಿಮಾನಿಯಾಗಿ ಬದುಕುತ್ತಿದ್ದೇನೆ. ನಾನು ನನ್ನ ಬದುಕಲ್ಲೇ ಯಾರ ಬೂಟು ನೆಕ್ಕಿಲ್ಲ ಹಾಗೇ ಮಾಡಿದ್ದರೆ ನಾನು ಎಷ್ಟೋ ಬಾರಿ ಎಂಎಲ್ಎ, ಮಂತ್ರಿ ಆಗುತ್ತಿದೆ. ನೀವು ಹೇಳಿದ್ದನೆಲ್ಲ ನಂಬಲು ಜನ ಒಂದು ಸೈಡ್ ಇಲ್ಲ. ಸತ್ಯ ಹೇಳುವುದಕ್ಕೆ ಸೋಷಿಯಲ್ ಮೀಡಿಯಾ ಇದೆ. ಇದೆನಾ ನೀವು ಹಿರಿಯ ನಟರಿಗೆ ಕೊಡು ಗೌರವಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರನ್ನು ಕಳೆದುಕೊಂಡ ಹೋದ ಮೇಲೆ ಕನ್ನಡ ಸ್ವಾಭಿಮಾನವು ಸಾಯುತ್ತಿದೆ. ಉಳಿದಿರುವುದು ನಾವು ಕೆಲವರು ಮಾತ್ರ ನಾವು ಸತ್ತ ಮೇಲೆ ನಮ್ಮ ತಿಥಿಯನ್ನು ಮಾಡಿ ಸಂತೋಷವನ್ನು ಪಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಕಲಾವಿದರ ಮಧ್ಯೆ ತಂದು ಇಟ್ಟು ತಮಾಷೆ ಮಾಡುವುದನ್ನು ಬಿಟ್ಟು ಬಿಡಿ. ಜನರಿಗೆ ಒಂದು ದಿನ ಸತ್ಯ ಏನು ಎಂಬುದು ಗೊತ್ತಾಗುತ್ತದೆ. ನಾನು ಅಪ್ಪನಿಗೆ ಹುಟ್ಟಿದ ಮಗ.. ನಾನು ಎಲ್ಲಿಯೂ ಓಡಿ ಹೋಗಲ್ಲ. ನನಗೆ ಗೊತ್ತು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಜಗ್ಗೇಶ್ ಅವರು ಹೇಳಿದ್ದಾರೆ.

ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ : ಚಿತ್ರದ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd