ಹುಟ್ಟೂರು ಬಸ್ರೂರಿನಲ್ಲಿ ರವಿಯ ಹೈಟೆಕ್ ಮ್ಯೂಸಿಕ್ ಸ್ಟುಡಿಯೋ ಉದಯ..!
ಈಗಿನ ದಿನಗಳಲ್ಲಿ ಹಳ್ಳಿಗಳಿಂದ ಪಟ್ಟಣದತ್ತ ಮುಖ ಮಾಡುತ್ತಿರೋರೆ ಹೆಚ್ಚು. ಆದ್ರೆ ತನ್ನ ಹುಟ್ಟೂರಿನ ಮೇಲಿನ ಪ್ರೀತಿ, ತಮ್ಮ ತವರೂರಿನಲ್ಲಿರುವ ಜನರ ನಂಬಿಕೆ ಪ್ರೀತಿಯ ಮರೆಯದ ರವಿ ಬಸ್ರೂರು ತಾವಂದುಕೊಂಡಂತೆ ತಮ್ಮ ಹಳ್ಳಿಯತ್ತ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ. ತಾವು ಹುಟ್ಟಿ ಬೆಳೆದ ಊರಿನಲ್ಲಿ ತಮ್ಮ ಕನಸಿನಂತೆ ಸುಸಜ್ಜಿತ ಮ್ಯೂಸಿಕ್ ಸ್ಟುಡಿಯೋ ನಿರ್ಮಿಸಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಹಳ್ಳಿಯಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ಮೇಲೆ ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಹೋಗೋದು ಬೇಡ ಬದಲಾಗಿ ಸೌಥ್ ಸ್ಟಾರ್ ಗಳೆಲ್ಲಾ ಬಸ್ರೂರಿಗೆ ಬರುತ್ತಾರೆ.
‘ಮಾದಕ’ ಬೆಡಗಿ ಸಂಜನಾಗೆ ಕೊನೆಗೂ ಸಿಕ್ತು ಜಾಮೀನು..! ಶರತ್ತುಗಳೇನು..?
ಕುಂದಾಪುರದ ಬಸ್ರೂರಿನಲ್ಲಿ ಜನಿಸಿದ ರವಿ ಬಸ್ರೂರು ಅವರು ಎಲ್ಲರಂತೆಯೇ ಕನ್ನ ಕನಸ ಬೆನ್ನಟ್ಟಿ ಪಟ್ಟಣಕ್ಕೆ ಹೊರಟರು. ಆದರೆ ಹಳ್ಳಿ ಮರೆಯಲಿಲ್ಲ. ತನ್ನವರನ್ನ, ತಾನು ಹುಟ್ಟಿಬೆಳೆದ ಜಾಗವನ್ನ ಮರೆಯಲಿಲ್ಲ. ಈಗ ತಮ್ಮ ಹುಟ್ಟೂರಿನಲ್ಲಿ ಸಂಗೀತ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಹುಟ್ಟೂರನ್ನು ಬಿಟ್ಟು ಬೆಂಗಳೂರಿಗೆ ಬರುವಾಗ ಮತ್ತೆ ಹಳ್ಳಿಗೆ ಹಿಂತಿರುಗಿ ಬರುವುದಾಗಿ ಶಪತ ಮಾಡಿದ್ದರು. ಅವರು ಅಂದುಕೊಂಡಂತೆಯೇ ಕೊಟ್ಟ ಮಾತಿನಂತೆ ಈಗ ಮತ್ತೆ ತಮ್ಮ ಊರಿನತ್ತ ಮರಳಿದ್ದಾರೆ.
ಕನಸು ನನಸಾಗಿಸಿಕೊಂಡು ಸಾಧನೆ ಮಾಡಿ, ನಟನಾಗಿ, ನಿರ್ದೇಶಕ,ಸಂಭಾಷಣಾಕಾರ,ನಿರ್ಮಾಪಕ ಮತ್ತು ಗೀತರಚನಾಕಾರನಾಗಿ ಗುರುತಿಸಿಕೊಂಡ ಬಸ್ರೂರು ತಮ್ಮ ಹುಟ್ಟೂರಿಗೆ ಬಳುವಳಿ ನೀಡಿದ್ದಾರೆ. ಬಸ್ರೂರಿನಲ್ಲಿ ಹೈಟೆಕ್ ಸ್ಟುಡಿಯೋ ನಿರ್ಮಾಣ ಮಾಡಿ ಜನಮನ ಗೆದ್ದಿದ್ದಾರೆ. ಇವರ ಈ ಹೊಸ ಮ್ಯೂಸಿಕ್ ಆ್ಯಂಡ್ ಮೂವೀಸ್ ಸ್ಟುಡಿಯೋದಲ್ಲಿ ಸಂಗೀತ, ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮಾಡಲಾಗುತ್ತದೆ. ಕೆ.ಜಿ.ಎಫ್ ಸೇರಿ ಕನ್ನಡ ,ತೆಲುಗು, ಮಲಯಾಳಂ ಸೂಪರ್ ಸ್ಟಾರ್ ಗಳ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗ ಕುಂದಾಪುರದ ಬಸ್ರೂರಲ್ಲೇ ಭರದಿಂದ ಸಾಗ್ತಿದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ಸ್ಟುಡಿಯೋ ದಲ್ಲಿ ಕೆಲಸ ನಡೆಯುತ್ತೆ.
“ಜೊತೆಜೊತೆಯಲಿ” ಧಾರಾವಾಹಿಯಿಂದ ಅನಿರುದ್ಧ ಔಟ್ ..? ಕಾರಣ ಬಿಗ್ ಬಾಸ್ ..!
ಬಸ್ರೂರು ಅವರು ಚಿಕ್ಕ ವಯಸ್ಸಿನಲ್ಲೇ ತಮ್ಮ ಹುಟ್ಟೂರಿಗಾಗಿ ಏನನ್ನಾದರೂ ಮಾಡಲೇಬೇಕೆಂಬ ಕನಸು ಹೊತ್ತಿದ್ದವರು. ಬಹುದಿನಗಳಿಂದಲೂ ತಮ್ಮ ಹುಟ್ಟೂರಿನಲ್ಲಿ ಒಂದು ಸುಸಜ್ಜಿತ ಮ್ಯೂಸಿಕ್ ಸ್ಟುಡಿಯೋ ಮಾಡಬೇಕೆಂಬ ಅವರ ಡ್ರೀಮ್ ಇದೀಗ ನಿಜ ಆಗಿದೆ. ಅಂದ್ಹಾಗೆ 3 ಕೋಟಿಗೂ ಅಧಿಕವೆಚ್ಚದಲ್ಲಿ ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ ಎನ್ನಲಾಗುತ್ತಿದೆ. ಒಂದು ಎಕರೆ ಜಾಗದಲ್ಲಿ ತಮ್ಮ ಮನೆಯ ಬಳಿಯೇ ರವಿ ಬಸ್ರೂರು ಅವರು ಮ್ಯೂಸಿಕ್ ಸ್ಟುಡಿಯೋ ನಿರ್ಮಿಸಿದ್ದಾರೆ. ಬಸ್ರೂರು ಅವರ ಸಾಧನೆಗೆ ಕನ್ನಡ ಸಿನಿ ತಾರೆಯರು ಕನ್ನಡಾಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel