ಲಕ್ನೋ: ಪಾಕ್ ನ ಗುಪ್ತಚರ ಸಂಸ್ಥೆ (ISI) ಹಾಗೂ ಭಯೋತ್ಪಾದಕರಿಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ (Uttar Pradesh) ಭಯೋತ್ಪಾದನಾ ನಿಗ್ರಹ ದಳ (ATS)ದ ಅಧಿಕಾರಿಗಳು ಬಂಧಿಸಿದ್ದಾರೆ. ಪಂಜಾಬ್ನ ಭಟಿಂಡಾ ಮೂಲದ ಅಮೃತ್ ಗಿಲ್ ಅಲಿಯಾಸ್ ಅಮೃತ್ ಪಾಲ್ (25) ಹಾಗೂ ಗಾಜಿಯಾಬಾದ್ನ ರಿಯಾಜುದ್ದೀನ್ (36) ಬಂಧಿತ ಶಂಕಿತರು.
ಅನುಮಾನಾಸ್ಪದ ಮೂಲಗಳಿಂದ ಹಣ ಪಡೆಯುತ್ತಿದ್ದರು ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮತ್ತು ಬೇಹುಗಾರಿಕೆಗೆ ಬಳಕೆಯಾಗುತ್ತಿದೆ ಎಂದು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.