ರಾಜ್ಯದ ಹಲವು ಶಾಲೆಗಳಲ್ಲಿ ಕೋವಿಡ್ ಪತ್ತೆ – ಹಾಸ್ಟೆಲ್ ಸೀಲ್ ಡೌನ್
ರಾಜ್ಯದ ಹಲವು ಶಾಲಾ ಕಾಲೇಜುಗಳಲ್ಲಿ ಇಂದು ಸಹ ಕರೊನಾ ಸೊಂಕಿನ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದ ರಾಣಿ ಚೆನ್ನಮ್ಮ ಬಾಲಕೀಯರ ವಸತಿ ಶಾಲೆಯ ಮಕ್ಕಳಿಗೆ ಕರೋನಾ ಸೋಂಕು ದೃಢಪಟ್ಟಿದೆ.
15 ರಿಂದ 18 ವರ್ಷದ ವಿದ್ಯಾರ್ಥಿನಿಯರಲ್ಲಿ ಒಟ್ಟು 68 ವಿದ್ಯಾರ್ಥಿಗಳಲ್ಲಿ ಕೋವಿಡ್ -19 ಸೋಂಕು ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ವಿದ್ಯಾರ್ಥಿನಿಯರಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು 102 ವಿದ್ಯಾರ್ಥಿಗಳಿಗೆ ಆಂಟಿ ರ್ಯಾಪಿಡ್ ಟೆಸ್ಟ್ ಜೊತೆ ಆರ್ ಟಿ ಪಿ ಸಿಆರ್ ಪರೀಕ್ಷೆ ಮಾಡಿಸಿದಾಗ ಮೊದಲು 12 ನಂತರ 68 ವಿದ್ಯಾರ್ಥಿಗಳಿಗೆ ಕರೋನಾ ಪಾಸಿಟಿವ್ ಕಂಡು ಬಂದಿದೆ.
ಧಾರವಾಡದ ವಸತಿ ಶಾಲೆಯಲ್ಲೂ ಪತ್ತೆ.
ಇನ್ನೊಂದೆಡೆ ಧಾರವಾಡ ನಗರದ ಪೊಲೀಸ್ ಹೆಡ್ ಕ್ವಾರ್ಟ್ರಸ್ ಬಳಿಯ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲೂ 13 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು ಪತ್ತೆಯಾಗಿದೆ.
71 ವಿದ್ಯಾರ್ಥಿನಿಯರಿಗೆ ಕರೋನಾ ಪರೀಕ್ಷೆ ಮಾಡಿಸಿದಾಗ 13 ಜನರಿಗೆ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ವಸತಿ ಶಾಲೆಯನ್ನ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿನಿಯರನ್ನ ಕ್ವಾರಂಟೈನ್ ಮಾಡಲಾಗಿದೆ.