ರಷ್ಯಾ ದಾಳಿಯಿಂದ ಉಕ್ರೇನ್ ಗೆ 1 ಟ್ರಿಲಿಯನ್ ಡಾಲರ್ ನಷ್ಟ
ಉಕ್ರೇನ್: ರಷ್ಯಾ ಮತ್ತು ಉಕ್ರೇನ್ ಪ್ರಾರಂಭವಾಗಿ ಒಂದು ತಿಂಗಳುಗಳೇ ಕಳೆದಿವೆ. ಯುದ್ಧದಲ್ಲಿ ಎರಡು ದೇಶಗಳು ಸಾಕಷ್ಟು ನಷ್ಟವನ್ನು ಅನುಭವಿಸಿವೆ, ಅದರಲ್ಲಂತು ಉಕ್ರೇನ್ ಬರೋಬ್ಬರಿ 1 ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಿದೆ.
ಈ ವಿಷಯವನ್ನು ಸ್ವತಃ ಉಕ್ರೇನಿಯನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಒಪ್ಪಿಕೊಂಡಿದ್ದಾರೆ ಎಂದು ಇಂಟರ್ಫ್ಯಾಕ್ಸ್-ಉಕ್ರೇನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೇ ಇದೇ ರೀತಿ ಯುದ್ಧ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ರಷ್ಯಾದ ದಾಳಿಯಿಂದ ಉಕ್ರೇನ್ ಪ್ರಮುಖ ನಗರಗಳು, ಕಟ್ಟಡಗಳು, ಸೇತುವೆಗಳು, ನಾಗರಿಕರ ಮತ್ತು ಮಿಲಟಿರಿ ಮೌಲಸೌಕರ್ಯಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ. ಈ ಮೂಲಕ ಪರೋಕ್ಷವಾಗಿ 1 ಲಕ್ಷ ಕೋಟಿ ನಷ್ಟವಾಗಿದ್ದರೆ, ನೇರ ಹಾನಿಯ ವೆಚ್ಚ ಸುಮಾರು 270 ಶತಕೋಟಿ ಡಾಲರ್ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಸಂಘರ್ಷದಿಂದಾಗಿ ಉಕ್ರೇನ್ನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಈ ವರ್ಷ 35 ಪ್ರತಿಶತದಷ್ಟು ಕುಗ್ಗಲಿದೆ ಎಂದು ಉಕ್ರೇನ್ ಪ್ರಧಾನಿಗಳು ಅಂದಾಜಿಸಿದ್ದಾರೆ. 2020 ರಲ್ಲಿ 3.8-ಶೇಕಡಾ ಕುಸಿತದ ನಂತರ ಉಕ್ರೇನ್ನ ಜಿಡಿಪಿ 2021 ರಲ್ಲಿ 3.4 ರಷ್ಟು ಹೆಚ್ಚಾಗಿತ್ತು. ಆದರೆ ರಷ್ಯಾ ದಾಳಿಯಿಂದ ಉಕ್ರೇನ್ ಆರ್ಥಿಕತೆ ಭಾರಿ ಪ್ರಪಾತಕ್ಕೆ ಹೋಗಿದೆ.