ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲೆಡೆ ಸಂಭ್ರಮ ಈಗಿನಿಂದಲೇ ಮನೆ ಮಾಡಿದೆ.
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಬೆಳಿಗ್ಗೆ 10 ರಿಂದ ಮಂಗಳ ವಾದ್ಯ ಮೊಳಗಲಿದೆ. ಉತ್ತರ ಪ್ರದೇಶದ ಆದಿವಾಸಿ ಜನಾಂಗದವರ ಜಾನಪದ ವಾದ್ಯಮೇಳ, ಬುಡಕಟ್ಟು ಜನಾಂಗದವರು ಭಾರಿಸುವ ವಾದ್ಯ ಸೇರಿದಂತೆ ವಿವಿಧ ರಾಜ್ಯಗಳ 50ಕ್ಕೂ ಅಧಿಕ ಸಂಗೀತ ವಾದ್ಯ ತಂಡಗಳು ಭಾಗವಹಿಸಲಿವೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಂತರ ರಾಮ ಜ್ಯೋತಿ ಬೆಳಗುವ ಮೂಲಕ ದೀಪಾವಳಿ ಆಚರಣೆ ಮಾಡಲಾಗುತ್ತಿದೆ.
ಸಂಜೆ 10 ಲಕ್ಷ ದೀಪಗಳಿಂದ ಅಯೋಧ್ಯೆ ಕಂಗೊಳಿಸಲಿದೆ. ಅಯೋಧ್ಯೆಯ ಮನೆಗಳು, ಅಂಗಡಿಗಳು ಮತ್ತು ಪೌರಾಣಿಕ ಸ್ಥಳಗಳಲ್ಲಿ ‘ರಾಮ ಜ್ಯೋತಿ’ ಬೆಳಗಿಸಲಾಗುತ್ತದೆ. ಸರಯೂ ನದಿಯ ದಡದ ರಾಮ್ ಕಿ ಪಾಡಿಯಲ್ಲಿ ದೀಪ ಬೆಳಗಲಾಗುತ್ತದೆ. ಅಲ್ಲದೇ, 100 ದೇವಸ್ಥಾನಗಳಲ್ಲಿ ದೀಪ ಬೆಳಗಲಾಗುತ್ತಿದೆ.