ಮೆಕ್ಸಿಕೋ ಸಿಟಿ : ದಕ್ಷಿಣ ಮೆಕ್ಸಿಕನ್ (Mexico) ನ ಚಿಯಾಪಾಸ್‌ನಲ್ಲಿ ಸರಕು ಸಾಗಣೆ ವೇಳೆ ಟ್ರಕ್ ವೊಂದು ಅಪಘಾತವಾಗಿದ್ದು, 10 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ, ಈ ಘಟನೆಯಲ್ಲಿ 17 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಯಾಪಾಸ್‌ನಲ್ಲಿರುವ ಪಿಜಿಜಿಯಾಪಾನ್-ಟೋನಾಲಾ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಘಟನೆ ನಡೆಯುತ್ತಿದ್ದಂತೆ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆಯಲ್ಲಿ ಮಗು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ. 17 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೆಕ್ಸಿಕೊದಿಂದ ಅಮೆರಿಕ ದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚು. ಸೂಕ್ತ ನಿರ್ವಹಣೆ ಇಲ್ಲದ ವಾಹಗಳಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಇಂತಹ ಅವಘಡ ಸಂಭವಿಸುತ್ತಿವೆ. 2021ರಲ್ಲಿ ಕೂಡ ಭೀಕರ ಅಪಘಾತ ನಡೆದಿದ್ದು, 54 ಜನ ಸಾವನ್ನಪ್ಪಿದ್ದರು.