‘100’ ಸಿನಿಮಾ ಹಾಡಿ ಹೊಗಳಿದ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ
ರಮೇಶ್ ಅರವಿಂದ ನಟಿಸಿ ನಿರ್ದೇಶಿಸಿರುವ 100 ಸಿನಿಮಾ ಕನ್ನಡ ಮಾತ್ರೆವಲ್ಲದೆ ಬೇರೆ ಭಾಷೆಗಳಲ್ಲಿಯೂ ಸದ್ದು ಮಾಡುತ್ತಿದೆ. ಮತ್ತು ಚಿತ್ರ ರಸಿಕರಿಂದ ಉತ್ತಮ ವಿಮರ್ಶೆ ಪಡೆದುಕೊಳ್ಳುತ್ತಿದೆ.
ನ 19 ರಂದು ಬಿಡುಗಡೆಯಾಗಿದ್ದ 100 ಚಿತ್ರ ಥಿಯೇಟರ್ ಗಳಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಚಿತ್ರವನ್ನ ರಾಜಕಾರಣದ ಗಣ್ಯರು, ಮತ್ತು ಸೆಲೆಬ್ರಟಿಗಳು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಾಲಿಗೆ ಈಗ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರು ಸೇರಿದ್ದು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಬಹಳ ದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಎನ್ನುವುದನ್ನು ನಿರ್ದೇಶಕ ರಮೇಶ್ ಅರವಿಂದ್ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಮನೆ ಮಂದಿಯಲ್ಲ ಕುಳಿತುಕೊಂಡು ಈ ಚಿತ್ರವನ್ನ ನೋಡಬಹುದು ನೀವು ಕೂಡ ಚಿತ್ರವನ್ನ ನೋಡಿ ಎಂದು ಹೇಳಿದ್ದಾರೆ.
ಎಂ ರಮೇಶ್ ರೆಡ್ಡಿ ಈ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ರಚಿತ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.