ದಿನಗೂಲಿ ನೌಕರನೊಬ್ಬ ರಾತ್ರಿ ಕಳೆದು ಬೆಳಗಾಗುವುದರೊಳಗೆ 100 ಕೋಟಿಯ ಒಡೆಯನಾಗಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದಲ್ಲಿನ. ದಿನಗೂಲಿ ನೌಕರ ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಅವರ ಬ್ಯಾಂಕ್ ಖಾತೆಯಲ್ಲಿ 17 ರೂ. ಮಾತ್ರ ಇತ್ತು. ಈ ವ್ಯಕ್ತಿ ಬ್ಯಾಂಕ್ ಗೆ ಕೂಡ ಹೆಚ್ಚಾಗಿ ತೆರಳುತ್ತಿರಲಿಲ್ಲ. ಏಕೆಂದರೆ ಆತನ ದಿನಗೂಲಿಯಿಂದ ದುಡಿಯುವುದ ಕೇವಲ 200ರೂ. ನಿಂದ 300 ರೂ. ಹೀಗಾಗಿ ಆತ ಬ್ಯಾಂಕ್ ಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ, ಆತನ ಖಾತೆಗೆ 100 ಕೋಟಿ ರೂ. ಬಿದ್ದಿದೆ ಎಂದರೆ ಆತನಿಗೆ ಏನಾಗಬೇಕು ಹೇಳಿ.
ಈ 100 ಕೋಟಿ ರೂ. ಎಲ್ಲಿಂದ ಬಂದಿದೆ ಎಂಬುವುದು ಆ ವ್ಯಕ್ತಿಗೆ ಗೊತ್ತಿಲ್ಲ. ಇನ್ನು ಪೊಲೀಸರು ಕೂಡ ಆತನಿಗೆ ನೊಟೀಸ್ ನೀಡಿದ್ದಾರೆ. ಆತಂಕ ಹೆಚ್ಚಿಸಿದ್ದು, ತಾನು ಮಾಡದ ತಪ್ಪಿಗೆ ತನಗೆ ಏಕೆ ಈ ಶಿಕ್ಷೆ ಎಂದು ಅಲವತ್ತುಕೊಂಡಿದ್ದಾರೆ. ಸದ್ಯ ಮುರ್ಷಿದಾಬಾದ್ನ ಜಂಗೀಪುರ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣದ ದಾಖಲಾಗಿದ್ದು, ಈ ಹಣದ ಮೂಲಗಳ ಬಗ್ಗೆ ತಿಳಿಯಲು ತನಿಖೆ ಕೈಗೆತ್ತಿಕೊಂಡಿದ್ದಾರೆ.