ಡೆಮಾಸ್ಕಸ್: ಸಿರಿಯಾದಲ್ಲಿ (Syria Attack) ಉಗ್ರರು ದಾಳಿ ನಡೆಸಿದ್ದು, 100ಕ್ಕೂ ಅಧಿಕ ಜನರು ಸಾವನ್ನಪ್ಪಿ, 240ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಸಿರಿಯಾದ ಹೋಮ್ಸ್ ಪ್ರಾಂತ್ಯದ ಮಿಲಿಟರಿ ಕಾಲೇಜಿನಲ್ಲಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಡ್ರೋನ್ ದಾಳಿ ನಡೆದಿದೆ. ಈ ದಾಳಿಯಲ್ಲಿ ಕನಿಷ್ಠ 100 ಜನ ಬಲಿಯಾಗಿದ್ದು, 240ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 6 ಜನ ಮಕ್ಕಳು ಕೂಡ ಇದ್ದಾರೆ. ಗಾಯಾಳುಗಳಲ್ಲಿ ಕೂಡ ಹಲವರು ಗಂಭೀರವಾಗಿದ್ದಾರೆ. ಹೀಗಾಗಿ ಇನ್ನೂ ಹೆಚ್ಚಿನ ಸಾವು-ನೋವು ಸಂಭವಿಸಬಹುದು ಎಂದು ಹೇಳಲಾಗುತ್ತಿದೆ.
ಸ್ಫೋಟಕಗಳನ್ನು ಹೊತ್ತ ಡ್ರೋನ್‌ಗಳು ಸಮಾರಂಭವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಸಿರಿಯಾದ ಮಿಲಿಟರಿ ಹೇಳಿದೆ. ಆದರೆ, ಈ ಘಟನೆಯ ಹೊಣೆಯನ್ನು ಇದುವೆರೆಗೂ ಯಾರೂ ಹೊತ್ತಿಲ್ಲ ಎನ್ನಲಾಗಿದೆ.