ಚೀನಾದಲ್ಲಿ ತೀವ್ರ ವಿದ್ಯುತ್ ಬಿಕ್ಕಟ್ಟು..!
ಚೀನಾದಲ್ಲಿ ವಿದ್ಯುತ್ ಸಮಸ್ಯೆ ಉಲ್ಭಣವಾಗ್ತಿದೆ. ಇದ್ರಿಂದಾಗಿ ಮನೆಗಳಲ್ಲಿ ವಿದ್ಯುತ್ ಇಲ್ಲದೇ ಜನ ಪರದಾಡುವಂತಾಗಿದ್ರೆ , ಕಾರ್ಖಾನೆಗಳಲ್ಲಿ ಉತ್ಪಾದನೆ ಪ್ರಮಾಣ ಕಡಿಮೆಯಾಗುವಂತಾಗಿದೆ. ಇದ್ರಿಂದಾಗಿ ಒಂದೆಡೆ ಚೀನಾದ ಆರ್ಥಿಕತೆಯ ಮೇಲೆ ಹೊಡೆತ ಬೀಲ್ತಿದ್ರೆ ಮತ್ತೊಂದೆಡೆ ಜಾಗತಿಕ ಪೂರೈಕೆ ಚೇನ್ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ.
ಇನ್ನೂ ಈ ಸಮಸ್ಯೆಗೆ ಪರಿಹಾರವಾಗಿ ಹೆಚ್ಚತ್ತಿರುವ ವಿದ್ಯುತ್ ಬೇಡಿಕೆಯನ್ನ ತಗ್ಗಿಸಲು ಕಂಪನಿಗಳು ಅಥವ ಕಾರ್ಕಾನೆಗಳಲ್ಲಿ ಶಕ್ತಿಯ ಬಳಕೆ ಮಿತಿಗೊಳಿಸವಂತೆ ಸರ್ಕಾರವು ಸೂಚಿಸಿರುವುದಾಗಿ ತಿಳಿದುಬಂದಿದೆ. ಅಲ್ಲದೇ ಹಲವು ಮನೆಗಳಿಗೆ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ. ಇನ್ನೂ ವಿದ್ಯುತ್ ಸಮಸ್ಯೆಗಳಿಂದಾಗಿ ಅನೇಕ ಕಡೆಗಳಲ್ಲಿ ಜನ ಲಿಫ್ಟ್ ಗಳಲ್ಲಿ ಸಿಲುಕಿದ್ದಾಗಿಯೂ ವರದಿಯಾಗಿದೆ.
ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮಫ್ತಿ ಮತ್ತೆ ಗೃಹಬಂಧನದಲ್ಲಿ..!
ಇದ್ರಿಂದಾಗಿ ಜನರ ದೈನಂದಿನ ಜೀವನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ. ಅಲ್ಲದೇ ವ್ಯಾಪಾರ ಚಟುವಟಿಕೆಗಳಿಗೆ ದೊಡ್ಡ ಅಡ್ಡಿ ಉಂಟು ಮಾಡಿದೆ. ಹಲವು ಸಂಸ್ಥೆಗಳು ವಾರಕ್ಕೆ ಎರಡು ಅಥವಾ ಮೂರು ದಿನ ಕೆಲಸ ಮಾಡುವ ಮೂಲಕ ಬೇಡಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನೂ ಚೀನಾದ ಸ್ಟೇಟ್ ಗ್ರಿಡ್ ಕಾರ್ಪೊರೇಶನ್ ವಿದ್ಯುತ್ ಪೂರೈಕೆಯ ಕಠಿಣ ಪರಿಸ್ಥಿತಿಯ ವಿರುದ್ಧ ಹೋರಾಡಲು ಎಲ್ಲ ಕ್ರಮಗಳನ್ನ ತೆಗೆದುಕೊಳ್ಳುವುದಾಗಿ ತಿಳಿಸಿದೆ. ಜೂನ್ ನಲ್ಲಿ ಇದೇ ರೀತಿಯ ವಿದ್ಯುತ್ ಕೊರತೆಯಿಂದ ಚೀನಾ ತತ್ತರಿಸಿತ್ತು.