ಹಸಿವು ತಾಳಲಾರದೆ ಮಗಳನ್ನ ಮಾರಾಟ ಮಾಡಿದ ತಂದೆ.
ಅಫ್ಘಾನಿಸ್ತಾನದಲ್ಲಿ ಆಡಳಿತ ಸರ್ಕಾರವು ಬಿದ್ದುಹೋಗಿ ತಾಲಿಬಾನ್ ಆಡಳಿತ ಬಂದ ನಂತರದಿಂದ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟನ್ನ ದೇಶ ಎದುರಿಸುತ್ತಿದೆ. ಅಫ್ಘಾನ್ ಜನರ ಪರಿಸ್ಥಿತಿ ಹೀನಾಯಮಾನವಾಗಿದೆ. ಹಸಿವನ್ನ ತಾಳಲಾರದೆ ಹೆತ್ತ ಮಕ್ಕಳನ್ನ ಮಾರಾಟ ಮಾಡಿ ಬದುಕು ಸಾಗಿಸಬೇಕದ ದುಸ್ಥಿತಿಗೆ ಅಫ್ಘಾನ್ ಬಂದು ನಿಂತಿದೆ.
ಹಸಿವನ್ನ ತಾಳಲಾರದೆ ತನ್ನ 9 ವರ್ಷದ ಪರ್ವಾನ ಮಲೀಕ್ ಎಂಬ ಹೆಣ್ಣು ಮಗಳನ್ನ ಆಕೆಯ ತಂದೆ ಅಬ್ದುಲ್ ಮಲೀಕ್ 55 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿರುವ ಮನಕಲಕುವ ಘಟನೆ ಅಫ್ಘಾನ್ ನಲ್ಲಿ ಬೆಳಕಿಗೆ ಬಂದಿದೆ.
ಪರ್ವಾನ ಅವರ ಕುಟುಂಬವು 8 ಸದಸ್ಸ್ಯರನ್ನು ಹೊಂದಿದ್ದು ಎಲ್ಲರೂ ಕೂಡ ಶಿಬಿರದಲ್ಲಿ ವಾಸ ಮಾಡುತ್ತಿದ್ದಾರೆ. ಪರ್ವಾನ ಅವರ ತಂದೆ ಅಬ್ದುಲ್ ಮಲಿಕ್ ತನ್ನ 12 ವರ್ಷದ ಮಗಳನ್ನ ಒಂದೆರೆಡು ತಿಂಗಳ ಹಿಂದೆ ಮಾರಾಟ ಮಾಡಿರುವ ವಿಷಯವನ್ನ ಬಹಿರಂಗಪಡಿಸಿದ್ದಾರೆ.
ಮಗು ಪರ್ವಾನಳನ್ನ ಆಕೆಯ ತಂದೆ 2,24,694 ರುಪಾಯಿಗಳಿಗೆ ಮಾರಾಟ ಮಾಡಿದ್ದಾನೆ. ನಂತರ ನನ್ನ ಮಗಳನ್ನ ಚೆನ್ನಾಗಿ ನೋಡಿಕೊಳ್ಳಿ ದಯವಿಟ್ಟು ಅವಳನ್ನ ಹೊಡೆಯಬೇಡಿ ಎಂದು ಬೇಡಿಕೊಂಡಿದ್ದಾನೆ.