ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಅವರು ಶಿವನಿಗೆ ಸಮರ್ಪಿತವಾದ 12 ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿರುವ ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಶಂಕರಾಚಾರ್ಯರ ಭವ್ಯವಾದ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಐತಿಹಾಸಿಕ ಸಂದರ್ಭವಾಗಲಿದೆ. ಆದಿ ಶಂಕರಾಚಾರ್ಯರು ಇಂದಿನ ಕೇರಳದಲ್ಲಿ ಜನಿಸಿದರೂ ಕಾಡು, ಪರ್ವತಗಳ ಮೂಲಕ ಪ್ರಯಾಣಿಸಿ ಓಂಕಾರೇಶ್ವರದಲ್ಲಿ ಜ್ಞಾನೋದಯ ಪಡೆದರು ಎಂದು ಹೇಳಿದ್ದಾರೆ. ಖಾಂಡ್ವಾ ಜಿಲ್ಲೆಯ ದೇವಾಲಯ ಪಟ್ಟಣದಲ್ಲಿ ಜ್ಞಾನವನ್ನು ಪಡೆದ ನಂತರ, 8ನೇ ಶತಮಾನದ ತತ್ವಜ್ಞಾನಿ ಕಾಶಿಗೆ ಪ್ರಯಾಣ ಬೆಳೆಸಿದರು ಎಂದು ಅವರು ಹೇಳಿದ್ದಾರೆ.
ಇದು ಓಂಕಾರೇಶ್ವರ ನರ್ಮದಾ ನದಿಯ ದಡದಲ್ಲಿರುವ ಸುಂದರವಾದ ಮಾಂಧಾತಾ ಬೆಟ್ಟದ ಮೇಲೆ ನೆಲೆಗೊಂಡಿದೆ. ಸಿಎಂ ಚೌಹಾಣ್ ವಿವಿಧ ಆಚರಣೆಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಧಾರ್ಮಿಕ ಪುಸ್ತಕಗಳನ್ನು ಸಹ ಬಿಡುಗಡೆ ಮಾಡಲಿದ್ದಾರೆ.