ಅಡುಗೆ ಎಣ್ಣೆ ದರ ಇಳಿಸಿದ ಕೇಂದ್ರ ಸರ್ಕಾರ
ಪೆಟ್ರೋಲ್ ಮತ್ತು ಡಿಸೇಲ್ ನಂತರದಲ್ಲಿ ಕೇಂದ್ರ ಸರಕಾರ ಅಡುಗೆ ಎಣ್ಣೆ ಬೆಲೆಯನ್ನ ಕೆಜಿ ಗೆ 5 ರಿಂದ 20 ರುಪಾಯಿವರೆಗೆ ಇಳಿಸಿದೆ. ದೇಶದಾದ್ಯಂತ ಪ್ರಮುಖ ರಿಟೇಲ್ ಮಾರುಕಟ್ಟೆಗಳಲ್ಲಿ ಅಡುಗೆ ಎಣ್ಣೆಯ ರಿಟೇಲ್ ದರವು ಪ್ರತಿ ಕೆ.ಜಿಗೆ 5 ರಿಂದ 20ರವರೆಗೆ ಇಳಿಕೆ ಆಗಿದೆ ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಕೇಂದ್ರ ಸರಕಾರವು ಆಮದು ಸುಂಕವನ್ನ ಕಡಿತಗೊಳಿಸಿ ಅಡಿಗೆ ಎಣ್ಣೆಯನ್ನ ಕಡಿಮೆಗೊಳಿದೆ. ಮತ್ತು ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಿಂದಾಗಿ ಸಾಗಾಣಿಕೆಯಿಂದಲೂ ಒಂದಷ್ಟು ಮೊತ್ತ ಕಡಿಮೆ ಆಗಲಿದೆ ಎಂದು ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. ದೆಹಲಿಯಲ್ಲಿ ರಿಟೇಲ್ ತಾಳೆ ಎಣ್ಣೆ ದರವು ಕೆ.ಜಿಗೆ 139 ರಿಂದ 133ಕ್ಕೆ ಇಳಿಕೆ ಆಗಿದೆ.
ಉತ್ತರ ಪ್ರದೇಶದ ಅಲಿಘಡನಲ್ಲಿ ಕೆ.ಜಿಗೆ 140ರಷ್ಟು ಇದ್ದಿದ್ದು 122ಕ್ಕೆ ಅಂದರೆ 18ರಷ್ಟು ಇಳಿಕೆ ಆಗಿದೆ. ಕಡಲೆಕಾಯಿ ಎಣ್ಣೆ ದರವು ಕೆ.ಜಿಗೆ 5 ರಿಂದ 10ರವರೆಗೆ, ಸೋಯಾಬಿನ್ ಎಣ್ಣೆ ಬೆಲೆ ಕೆ.ಜಿಗೆ 5 ರಿಂದ 11ರವರೆಗೆ ಹಾಗೂ ಸೂರ್ಯಕಾಂತಿ ಎಣ್ಣೆಯ ಬೆಲೆ ಕೆ.ಜಿಗೆ 5 ರಿಂದ 20ರವರೆಗೂ ಇಳಿಕೆ ಆಗಿದೆ.
ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಅದಾನಿ ವಿಲ್ಮಾರ್ ಮತ್ತು ರುಚಿ ಇಂಡಸ್ಟ್ರೀಸ್ ಸೇರಿದಂತೆ ಪ್ರಮುಖ ಖಾದ್ಯ ತೈಲ ಕಂಪನಿಗಳು ಸಗಟು ಬೆಲೆಗಳನ್ನು ಲೀಟರ್ಗೆ 4 -7 ರಷ್ಟು ಕಡಿತಗೊಳಿಸಿದೆ ಎಂದು ಆಹಾರ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಜೆಮಿನಿ ಎಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ, ಹೈದರಾಬಾದ್, ಮೋದಿ ನ್ಯಾಚುರಲ್ಸ್, ದೆಹಲಿ, ಗೋಕುಲ್ ರೀ-ಫಾಯಿಲ್ಸ್ ಮತ್ತು ಸಾಲ್ವೆಂಟ್, ವಿಜಯ್ ಸಾಲ್ವೆಕ್ಸ್, ಗೋಕುಲ್ ಆಗ್ರೋ ರಿಸೋರ್ಸಸ್ ಮತ್ತು ಎನ್ಕೆ ಪ್ರೋಟೀನ್ಗಳಂತಹ ಇತರ ಆಟಗಾರರು ಸಹ ಖಾದ್ಯ ತೈಲಗಳ ಸಗಟು ಬೆಲೆಯನ್ನು ಕಡಿಮೆ ಮಾಡಿದ್ದಾರೆ.