ಚಿನ್ನದ ಗಣಿ ಕುಸಿತ 18 ಜನರ ಸಾವು 7 ಮಂದಿ ಗಾಯ

1 min read

ಚಿನ್ನದ ಗಣಿ ಕುಸಿತ 18 ಜನರ ಸಾವು 7 ಮಂದಿ ಗಾಯ

ನೈಜೀರಿಯಾ ದೇಶದ ಗಡಿಯ ದಕ್ಷಿಣ ನೈಜರ್ ಸಮೀಪದಲ್ಲಿ  ಚಿನ್ನದ ಗಣಿ ಕುಸಿತಗೊಂಡಿದೆ. ಗಣಿಯಲ್ಲಿ  ಕೆಲಸ ಮಾಡುತ್ತಿದ್ದ 18 ಜನ ಸಾವನ್ನಪ್ಪಿದ್ದಾರೆ. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದಾರೆ.

ಭಾನುವಾರ ಮಧ್ಯಾಹ್ನ ಗ್ಯಾರಿನ್-ಲಿಮ್ಮನ್ ಗಣಿ ಸೈಟ್‌ನಲ್ಲಿ ಗಣಿ ಬಾವಿ ಕುಸಿದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಗಣಿಯ ಕೆಳಭಾಗದಲ್ಲಿ ಇನ್ನೂ ದೇಹಗಳು ಸಿಕ್ಕಿಬಿದ್ದಿರಬಹುದು” ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಗ್ಯಾರಿನ್-ರಿಮಾನ್ ಗಣಿಯನ್ನು ಕೆಲವೇ ತಿಂಗಳುಗಳ ಹಿಂದೆ ಕಂಡುಹಿಡಿಯಲಾಯಿತು, ಅಂದಿನಿಂದ ಸಾವಿರಾರು ಜನರು ಗಣಿಗಾರಿಕೆ ಕೆಲಸ ಹಾಜರಾಗಿದ್ದರು.

ಮಣ್ಣಿನ ಅಸ್ಥಿರತೆ ಮತ್ತು ಗಣಿಗಾರಿಕೆಯಲ್ಲಿ  ಅಳವಡಿಸಿಕೊಂಡ ಹಳೆಯ ವಿಧಾನಗಳಿಂದಾಗಿ ಈ ಸ್ಥಳದಲ್ಲಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

EMI  ಮೂಲಕ ಟಿಕೆಟ್ ಬುಕ್ ಮಾಡಿ ವಿಮಾನದಲ್ಲಿ ಹಾರಾಡಿ…

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd