ಪ್ರೇಮಂ ಪೂಜ್ಯಂ ಚಿತ್ರ ರಿಲೀಸ್ – ಚಾರ್ಮ್ ಕಂಡುಕೊಂಡ ಲವ್ಲಿ ಸ್ಟಾರ್
ಲವ್ ಲಿ ಸ್ಟಾರ್ ನಟ ‘ನೆನಪಿರಲಿ’ ಪ್ರೇಮ್ಅಭಿನಯದ ‘ಪ್ರೇಮಂ ಪೂಜ್ಯಂ’ ಸಿನಿಮಾ ಭಾರಿ ನೀರೀಕ್ಷೆ ಮೂಡಿಸಿತ್ತು. ಇಂದು (ನ.12) ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಎರಡನೇ ಲಾಕ್ಡೌನ್ ಬಳಿಕ ಮಂಕಾಗಿದ್ದ ಚಿತ್ರ ರಂಗ ಈಗ ಚೇತರಿಸಿಕೊಳ್ಳುತ್ತಿದೆ. ಹಲವು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆ ಆಗುತ್ತಿವೆ. ಆ ಪೈಕಿ ‘ಪ್ರೇಮಂ ಪೂಜ್ಯಂ’ ಚಿತ್ರ ಗಮನ ಸೆಳೆಯುತ್ತಿದೆ.
ಪ್ರೇಮ್ ಶ್ರೀ ಹರಿ ಎನ್ನುವ ವೈದ್ಯನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೆಮ್ ಗೆ ನಾಯಕಿಯಾಗಿ ಬೃಂದಾ ಆಚಾರ್ಯ ಮತ್ತು ಐದ್ರಿಂತಾ ರೈ ನಟಿಸಿದ್ದಾರೆ.ಪ್ರೇಮ್ ಸ್ನೇಹಿತನ ಪಾತ್ರದಲ್ಲಿ ಮಾಸ್ಟರ್ ಆನಂದ್ ಇದ್ದಾರೆ ಇವರ ಗ್ಯಾಂಗ್ನಲ್ಲಿ ತಲೈವನಾಗಿ ಸಾಧುಕೋಕಿಲ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್, ಸಾಧುಕೋಕಿಲ ಜೋಡಿ ಆಗಾಗ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ಇಡುತ್ತೆ ಎನ್ನಲಾಗುತ್ತಿದೆ. ಪೋಷಕರ ಪಾತ್ರದಲ್ಲಿ ಅವಿನಾಶ್, ಮಾಳವಿಕಾ, ನಾಗಭರಣ ಕಾಣಿಸಿಕೊಂಡಿದ್ದಾರೆ.
ಚಿತ್ರದ ಮತ್ತೊಂದು ದೊಡ್ಡ ಶಕ್ತಿ ಅಂದರೆ ಲೊಕೇಷನ್ಗಳು ಮತ್ತು ಕ್ಯಾಮೆರಾ ವರ್ಕ್. ಸಿನಿಮಾದ ಪ್ರತಿ ಫ್ರೇಮ್ ಕೂಡ ಕಣ್ಣಿಗೆ ಹಬ್ಬದಂತಿದೆ. ಛಾಯಾಗ್ರಾಹಕ ನವೀನ್ ಕುಮಾರ್ ಕೈ ಚಳಕ ತೆರೆಯ ಮೇಲೆ ಚಮತ್ಕಾರ ಮಾಡಿದೆ.
ಈ ಚಿತ್ರಕ್ಕೆ ನಿರ್ದೇಶಕ ರಾಘವೇಂದ್ರ ಆಕ್ಷನ್ ಕಟ್ ಹೇಳಿದ್ದು ಕ್ಯಾಮರಮ್ಯಾನ್ ನವೀನ್ ಅವರ ಪೋಟೋಗ್ರಫಿ ಕೈ ಚಳಕವಿದೆ.