ವಿಶ್ವದ ಅತ್ಯಂತ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತ 3 ನಗರಗಳು.
ಬ್ರಿಟನ್ನ ಪರಿಸರ ಕಾರ್ಯಕ್ರಮದ ಸಹಭಾಗಿತ್ವ ವಹಿಸಿರುವ ಸ್ವಿಡ್ಜರ್ಲೆಂಡ್ ಮೂಲದ ಕ್ಲೈಮೇಟ್ ಗ್ರೂಪ್ ವಿಶ್ವದ 10 ಅತಿ ಮಾಲಿನ್ಯ ನಗರಗಳನ್ನು ಪಟ್ಟಿ ಮಾಡಿದೆ.ಈ ಟಾಪ್ 10 ಅತೀ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದಿವೆ.
ಈ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ . ಕೊಲ್ಕತ್ತ 4 ಮತ್ತು ಮುಂಬೈ 6ನೇ ಸ್ಥಾನದಲ್ಲಿವೆ.
ಹತ್ತಿರದ ರಾಜ್ಯಗಳಲ್ಲಿ ಕೃಷಿ ಬೆಂಕಿ ವಾಹನಗಳ ಹೊಗೆ ಹೊರಸೂಸುವಿಕೆಯಿಂದಾಗಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟಗಳು ಹೆಚ್ಚುತ್ತಿವೆ. ನಗರದಲ್ಲಿ ಆರೋಗ್ಯ ತುರ್ತುಸ್ಥಿತಿಯ ಆತಂಕವನ್ನು ಉಂಟುಮಾಡುತ್ತಿದೆ.
IQAir ಪ್ರಕಾರ, ಕೆಟ್ಟ ಗಾಳಿಯ ಗುಣಮಟ್ಟದ ಸೂಚಕಗಳು ಮತ್ತು ಮಾಲಿನ್ಯ ಶ್ರೇಯಾಂಕಗಳನ್ನು ಹೊಂದಿರುವ ಹತ್ತು ನಗರಗಳು ಇಲ್ಲಿವೆ
- ದೆಹಲಿ, ಭಾರತ (AQI: 556)
- ಲಾಹೋರ್, ಪಾಕಿಸ್ತಾನ (AQI: 354)
- ಸೋಫಿಯಾ, ಬಲ್ಗೇರಿಯಾ (AQI: 178)
- ಕೋಲ್ಕತ್ತಾ, ಭಾರತ (AQI: 177)
- ಜಾಗ್ರೆಬ್, ಕ್ರೊಯೇಷಿಯಾ (AQI: 173)
- ಮುಂಬೈ, ಭಾರತ (AQI: 169)
- ಬೆಲ್ಗ್ರೇಡ್, ಸೆರ್ಬಿಯಾ (AQI: 165)
- ಚೆಂಗ್ಡು, ಚೀನಾ (AQI: 165)
- ಸ್ಕೋಪ್ಜೆ, ಉತ್ತರ ಮ್ಯಾಸಿಡೋನಿಯಾ (AQI: 164)
- ಕ್ರಾಕೋವ್, ಪೋಲೆಂಡ್ (AQI: 160)