ಅಹಮದಾಬಾದ್ ಜಿಲ್ಲಾಧಿಕಾರಿಯಾದ 11 ವರ್ಷದ ಬಾಲಕಿ

1 min read
brain tumor saaksha tv

ಅಹಮದಾಬಾದ್ ಕಲೆಕ್ಟರ್ ಆದ 11 ವರ್ಷದ ಬಾಲಕಿ

ಗುಜರಾತ್ : ಅಹಮದಾಬಾದ್ ನಲ್ಲಿ 11 ವರ್ಷದ ಬಾಲಕಿ ಜಿಲ್ಲಾಧಿಕಾರಿಯಾಗಿದ್ದಾಳೆ. 11 ವರ್ಷದ ಫ್ಲೋರಾ ಅಸೋಡಿಯಾ ಎಂಬ ಬಾಲಕಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಳು. ಆದ್ರೆ ಈ ಬಾಲಕಿಗೆ ಕಲೆಕ್ಟರ್ ಆಗಬೇಕೆಂಬ ಕನಸು ಇತ್ತು. ಈ ಕನಸಿಗೆ ಬ್ರೈನ್ ಟ್ಯೂಮರ್ ಕೊಳ್ಳಿ ಇಟ್ಟಿತ್ತು.

ಇತ್ತೀಚೆಗೆ ಬಾಲಕಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಸದ್ಯ ಪರಿಸ್ಥಿತಿ ಹದಗಟ್ಟಿದೆ. ಈ ಮಧ್ಯೆ ಆ ಬಾಲಕಿಗೆ ಕಲೆಕ್ಟರ್ ಆಗಬೇಕು ಎಂಬ ಕನಸು ಇದ್ದಿದ್ದನ್ನು ತಿಳಿದ ಮೇಕ್ ಎ ವಿಶ್ ಫೌಂಡೇಷನ್, ಬಾಲಕಿಯ ಆಸೆಯನ್ನು ಈಡೇರಿಸಿದ್ದಾರೆ.

brain tumor saaksha tv

ಬಾಲಕಿಗೆ ಕಲೆಕ್ಟರ್ ಆಗಬೇಕೆಂಬ ಕನಸಿರುವ ಬಗ್ಗೆ ತಿಳಿದ ಮೇಕ್ ಎ ವಿಶ್ ಫೌಂಡೇಷನ್, ಅಹಮದಾಬಾದ್ ಕಲೆಕ್ಟರ್ ಸಂದೀಪ್ ಸ್ಯಾಂಗಲ್ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸಂದೀಪ್ ಸ್ಯಾಂಗಲ್ ಅವರ ಒಪ್ಪಿಗೆ ಮೇರೆಗೆ ಬಾಲಿಕಿಯನ್ನು ಒಂದು ದಿನದಮಟ್ಟಿಗೆ ಜಿಲ್ಲಾಧಿಕಾರಿಯನ್ನಾಗಿ ಮಾಡಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd