ರಾಷ್ಟ್ರಪತಿಗಳಿಂದ ಸೈನಿಕರಿಗೆ ಶೌರ್ಯ ಚಕ್ರ ಪ್ರಶಸ್ತಿ ಪ್ರಧಾನ
ಪ್ರಾಣವನ್ನ ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡಿದ ವೀರ ಯೋಧರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೋಮವಾರ ಶೌರ್ಯ ಚಕ್ರವನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೇಜರ್ ವಿಭೂತಿ ಶಂಕರ್ ಧೌಂಡ್ಯಾಲ್ ಮತ್ತು ನೈಬ್ ಸುಬೇದಾರ್ ಸೋಂಬಿರ್ (ಇಬ್ಬರೂ ಮರಣೋತ್ತರವಾಗಿ) ಮತ್ತು ಮೇಜರ್ ಮಹೇಶ್ಕುಮಾರ್ ಭುರೆ ಅವರಿಗೆ ಇ ಭಾರಿ ಶೌರ್ಯಚಕ್ರವನ್ನ ಪ್ರಧಾನ ಮಾಡಲಾಯಿತು.
2019 ರ ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಮೇಜರ್ ಧೌಂಡಿಯಾಲ್ ಹುತಾತ್ಮರಾಗಿದ್ದರು. ಸಮಾರಂಭದಲ್ಲಿ ಮೇಜರ್ ಧೌಂಡಿಯಾಲ್ ಪರವಾಗಿ ಅವರ ಪತ್ನಿ ಲೆಫ್ಟಿನೆಂಟ್ ನಿತಿಕಾ ಕೌಲ್ ಮತ್ತು ತಾಯಿ ಸರೋಜ್ ಧೌಂಡಿಯಾಲ್ ಪ್ರಶಸ್ತಿ ಸ್ವೀಕರಿಸಿದರು.
ನಾಯಬ್ ಸುಬೇದಾರ್ ಸೋಂಬಿರ್ ಅವರು ಫೆಬ್ರವರಿ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವಾಗ ಹುತಾತ್ಮರಾಗಿದ್ದರು. ತಾವು ಸಾಯುವ ಮೊದಲು ಮೂವರು ಉಗ್ರರನ್ನ ಎನ್ಕೌಂಟರ್ ಮಾಡಿ ಯಮಪುರಿಗೆ ಅಟ್ಟಿದ್ದರು.
ನವೆಂಬರ್ 25, 2018 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ಕಾರ್ಯಾಚರಣೆಯಲ್ಲಿ ಆರು ಟಾಪ್ ಮೋಸ್ಟ್ ಭಯೋತ್ಪಾದಕ ಕಮಾಂಡರ್ಗಳನ್ನು ಹತ್ಯೆಗೈದ ಕಾರ್ಯಾಚರಣೆಯಲ್ಲಿ “ಅನುಕರಣೀಯ ನಾಯಕತ್ವ ಮತ್ತು ಅಪ್ರತಿಮ ಧೈರ್ಯ” ಪ್ರದರ್ಶಿಸಿದ್ದಕ್ಕಾಗಿ ಮೇಜರ್ ಮಹೇಶ್ಕುಮಾರ್ ಭುರೆ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಲಾಯಿತು.