ಬರಲಿದೆ B H (ಭಾರತ್) ಸರಣಿಯ ವಾಹನ ನೊ0ದಾವಣಿ ನಂಬರ್ ಪ್ಲೇಟ್
ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪದೇ ಪದೇ ಪ್ರಯಾಣ ಮಾಡುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕೆಲಸಕ್ಕೆಂದು ಹೋಗುವಾಗ ವಾಹನದ ನೊಂದಾವಣಿ ದೊಡ್ಡ ತಲೆನೋವಾಗಿ ಕಾಡುತ್ತಿತ್ತು, ಇದಕ್ಕೆ ಪರಿಹಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊಸ ಪರಿಹಾರವೊಂದನ್ನ ತಂದಿದೆ.
ಕೇಂದ್ರ ಸರ್ಕಾರ B H ಅಂದರೆ ಭಾರತ್ ಸರಣಿಯ ಹೊಸ RTO ರಿಜಿಸ್ಟರ್ ಪ್ರಾರಂಭಿಸಿದೆ. ಇದರಿಂದ ಇಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಾಗಾಗ ಸ್ಥಳಾಂತರ ಆಗುವವರು ಪದೇ ಪದೇ ವಾಹನ ನೊಂದಾವಣಿ ಮಾಡುವ ಅಗತ್ಯ ಇರುವುದಿಲ್ಲ ಎಂದು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ.
ಬಿ ಎಚ್ ವಾಹನದ ಸರಣಿಯು ಬ್ಲಾಕ್ ಅಂಡ್ ವೈಟ್ ಬಣ್ಣದ ನಂಬರ್ ಪ್ಲೇಟ್ ಒಳಗೊಂಡಿದ್ದು, ವಾಹನದ ಸಂಖ್ಯೆಗೂ ಮೊದಲು ಬಿ ಎಚ್ ನಿಂದ ಪ್ರಾರಂಭವಾಗಲಿದೆ. ಇದನ್ನ ಪಡೆಯಲು ವಾಹನ ಸವಾರರು 2 ವರ್ಷಕ್ಕಿಂತ ಹೆಚ್ಚಿನ ತೆರಿಗೆ ಪಾವತಿಸಬೇಕಿದ್ದು, ಈ ಪ್ರಕ್ರಿಯೇ ಸಂಪೂರ್ಣ ಆನ್ ಲೈನ್ ಮೂಲಕ ನಡೆಯಲಿದೆ.