ಕ್ರಿಕೆಟಿಗ ಗೌತಮ್ ಗಂಭೀರ್ ಗೆ ಐಸಿಸ್ ಕಾಶ್ಮೀರದಿಂದ ಮತ್ತೆ ಬೆದರಿಕೆ ಇಮೇಲ್
ಬಿಜೆಪಿ ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್‌ಗೆ ‘ಐಸಿಸ್ ಕಾಶ್ಮೀರ’ದಿಂದ ಮೂರನೇ ಬಾರಿಗೆ ಕೊಲೆ ಬೆದರಿಕೆ ಬಂದಿದೆ. ದೆಹಲಿ ಪೊಲೀಸ್‌ನಲ್ಲಿರುವ ಭಯೋತ್ಪಾದಕ ಸಂಘಟನೆಯ ಗೂಢಚಾರರು ಮಾಜಿ ಕ್ರಿಕೆಟಿಗ ಗಂಭೀರ್ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಬೆದರಿಕೆ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ಐಸಿಸ್ ಕಾಶ್ಮೀರದಿಂದ ಬೆದರಿಕೆಯ ಇಮೇಲ್ ಬಂದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರಿಗೆ ಗೌತಮ್ ಗಂಭೀರ್ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಅವರಿಗೆ ಪೊಲಿಸ ಭದ್ರತೆ ಹೆಚ್ಚಿಸಲಾಗಿದೆ.
“ನಿಮ್ಮ ದೆಹಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ ಅವರು ಏನನ್ನೂ ಕಿತ್ತುಹಾಕಲು ಸಾಧ್ಯವಿಲ್ಲ. ನಮ್ಮ ಗೂಢಚಾರರು ಸಹ ಪೊಲೀಸರಲ್ಲಿ ಇದ್ದಾರೆ, ನಿಮ್ಮ ಬಗ್ಗೆ ಎಲ್ಲಾ ಮಾಹಿತಿಯನ್ನು ನಾವು ಸ್ವೀಕರಿಸುತ್ತಿದ್ದೇವೆ, ”ಎಂದು ಇಮೇಲ್ ಮಾಡಲಾಗಿದೆ. ಡಿಸಿಪಿ, ಸೆಂಟ್ರಲ್ ಶ್ವೇತಾ ಚೌಹಾಣ್ ಅವರು ಬೆದರಿಕೆ ಇಮೇಲ್‌ಗಳ ಬಗ್ಗೆ ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದರು, ಇವರನ್ನು ಸಹ ಉಲ್ಲೇಖಿಸಿ ಈಮೇಲ್ ಕಳಿಸಲಾಗಿದೆ.
ನವೆಂಬರ್ 28 ರ ಶನಿವಾರ ಮಧ್ಯಾಹ್ನ 1:37 ಕ್ಕೆ ಗಂಭೀರ್ ಇಮೇಲ್ ಸ್ವೀಕರಿಸಿದ್ದಾರೆ. ‘isiskashmir@yahoo.com’ ಇಮೇಲ್ ವಿಳಾಸದಿಂದ ಕಳುಹಿಸಲಾಗಿದೆ. ‘ಐಸಿಸ್ ಕಾಶ್ಮೀರ’ ಎಂದು ಹೇಳಿಕೊಳ್ಳುವ ವ್ಯಕ್ತಿ(ಗಳು) ಅಥವಾ ಸಂಘಟನೆಯಿಂದ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು.








