ಅಧಿವೇಶನದಲ್ಲಿ ಅಶಿಸ್ತು – ರಾಜ್ಯ ಸಭೇಯ 12 ವಿಪಕ್ಷ ಸದಸ್ಯರು ಅಮಾನತು.
ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ ಆದರೆ ಈ ಹಿಂದೆ ನಡೆದಿದ್ದ ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದರು ಎನ್ನುವ ಕಾರಣಕ್ಕೆ ರಾಜ್ಯ ಸಭೆಯ 12 ರಾಜ್ಯ ಸಭೆಯ 12 ವಿಪಕ್ಷ ಸದಸ್ಯರನ್ನ ಅಮಾನತುಗೊಳಿಸಲಾಗಿದೆ. ಕಾಂಗ್ರೇಸ್ ಸಂಸದರಾದ
ಪುಲೋ ದೇವಿ ನೇತಮ್
ಛಾಯಾ ವರ್ಮಾ
ರಿಪುನ್ ಬೋರಾ
ರಾಜಮಣಿ ಪಾಟೇಲ್
ಸೈಯದ ನಾಸಿರ ಹುಸೇನ್
ಅಖಿಲೇಶ್ ಪ್ರಸಾದ್ ಸಿಂಗ್
ಶಿವ ಸೇನಾ ಸದಸ್ಯರಾದ ಪ್ರಿಯಾಂಕ ಚತುರ್ವೇದಿ, ಅನಿಲ್ ದೇಸಾಯಿ. ಸಿಪಿಎಂ ಸದಸ್ಯರಾದ ಎಳಮರಂ ಕರೀಮ್, ಬಿನೋಯ್ ವಿಶ್ವಂ ಮತ್ತು ಟಿ ಎಂ ಸಿ ಸದಸ್ಯರಾದ ರಾಜಮಣಿ ಪಾಟಿಲ್, ಡೋಲಾ ಸೇನ್ ಅವರನ್ನ ಅಮಾನತುಗೊಳಿಸಲಾಗಿದೆ.
ಕಳೆದ ಭಾರಿ ಕೃಷಿ ಕಾಯ್ದೆ ಮತ್ತು ಪೆಗಾಸಸ್ ಸಂಬಂಧಿಸಿದಂತೆ ಚರ್ಚೆ ನಡೆಯುವಾಗ ರಾಜ್ಯಸಭೆಯ ನಿಯಮಗಳನ್ನ ಗಾಳಿಗೆ ತೂರಿ ಅಶಿಸ್ತು ತೋರಿಸಿದ್ದಕ್ಕೆ ಮುಂದಿನ ಚಳಿಗಾಳದ ಅಧಿವೇಶನದ ವರೆಗೂ ಈ ಸಂಸದರನ್ನ ಅಮಾನತುಗೊಳಿಸಲಾಗಿದೆ.
ಶಿವಾಲಯದ ಬಾವಿಯಿಂದ ಬಿಸಿ ನೀರು.. ಇದು ಶಿವನ ಮಹಿಮೆ ಎಂದ ಜನರು?








