ಹೊಸ ವರ್ಷದ ಬಾಡೂಟಕ್ಕೆ ಮೇಕೆ ಕದ್ದ ಪೊಲೀಸ್ ಇನ್ಸಪೆಕ್ಟರ್…..
1 min read
ಒಡಿಶಾ. ಹೊಸ ವರ್ಷಾಚರಣೆಗೆ ಆಚರಣೆ ಬಾಡುಟಕ್ಕೆಂದು ಇಲ್ಲೊಬ್ಬ ಪೊಲೀಸ್ ಇನಸ್ಪೆಕ್ಟರ್ ಪಕ್ಕದಲ್ಲಿ ಮೇಕೆಗಳನ್ನ ಕದ್ದು ಕೊಂದು ತಿಂದಿರುವ ಘಟನೆ ಒಡಿಶಾ ರಾಜ್ಯದಲ್ಲಿ ನಡೆದಿದೆ..
ಒಡಿಶಾ ರಾಜ್ಯದ ಬಲಂಗೀರ್ ಜಿಲ್ಲೆಯ ಸಿಂಧೇಕೆಲಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಸುಮನ್ ಮಲ್ಲಿಕ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿ ಹೊಸ ವರ್ಷದ ಪಾರ್ಟಿ ಮಾಡುವ ಸಲುವಾಗಿ ಎರಡು ಮೇಕೆಗಳನ್ನು ಕದ್ದಿದ್ದಾನೆ.
ಇದು ಮೇಕೆಗಳ ಮಾಲೀಕರಿಗೆ ಗೊತ್ತಾಗಿದ್ದು, ಮೇಕೆಗಳನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಪೊಲೀಸರು ಇವರನ್ನೆ ಬೆದರಿಸಿ ಮೇಕೆ ಹೊತ್ತೊಯದಿದ್ದಾರೆ. ಪೊಲೀಸ್ ವ್ಯಕ್ತಿ ಮೇಕೆ ಕತ್ತರಿಸುವುನ್ನ ನಮ್ಮ ಮಗಳು ನೋಡಿದ್ದಾಳೆ ಎಂದು ಮೇಕೆಯ ಮಾಲಿಕರು ಹೇಳಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಸಿಂಧೇಕೆಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶವ್ಯಕ್ತ ಪಡಿಸಿದ್ದಾರೆ. ನಂತರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿಯು ಸುಮನ್ ಮಲ್ಲಿಕ್ನನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ.