ಡ್ಯಾನ್ಸ್ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ಮೇಘನಾ ರಾಜ್
ಸರ್ಜಾ ಕುಟುಂಬದ ಸೊಸೆ ಮೇಘನಾ ರಾಜ್ ಬಹುದಿನಗಳ ನಂತರ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಕಲರ್ಸ್ಸ್ ಕನ್ನಡದ ಡ್ಯಾನ್ಸ್ ಶೋ ಮೂಲಕ ಕಿರುತೆರೆಗೆ ಭರ್ಜರಿ ಎಂಟ್ರಿ ಕೊಡಲಿದ್ದಾರೆ.
ಡ್ಯಾನ್ಸ್ ರಿಯಾಲಿಟಿ ಶೋ ಕುರಿತು ಕಲರ್ಸ್ ಕನ್ನಡ ಟೀಂ ಪ್ರೋಮೋ ರಿಲೀಸ್ ಮಾಡಿದ್ದು ಮೇಘನಾ ರಾಜ್ ಪ್ರೋಮೋವನ್ನ ಹಂಚಿಕೊಂಡಿದ್ದಾರೆ. “ ಸಾಕಷ್ಟು ಮೊದಲುಗಳಿವೆ, ಅದರಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ನ ಜಡ್ಜ್ ಆಗಿ ಇದೆ ಮೊದಲ ಭಾರಿ ಕಾಣಿಸಿಕೊಳ್ಲುತ್ತಿದ್ದೇನೆ. ಲೋಕೇಶ್ ಪ್ರೊಡಕ್ಷನ್ ತಂಡಕ್ಕೆ ಧನ್ಯವಾದಗಳು . ಎಲ್ಲಾ ಸ್ಪರ್ಧಿಗಳಿಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ದಾರೆ.
ಕಲರ್ಸ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಚಾಂಪಿಯನ್ ಶಿಪ್ ಶೋ ಮೂಡಿ ಬರುತ್ತಿದೆ. ಈ ಶೋನಲ್ಲಿ ಜಡ್ಜ್ ಆಗಿ ಮಯೂರಿ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳಲಿದ್ದು ಅವರ ಜೊತೆ ಮೇಘನಾ ರಾಜ್ ಸಹ ಜಡ್ಜ್ ಆಗಿ ಅವರ ತಂಡ ಕೂಡಿಕೊಂಡಿದ್ದಾರೆ.