COVID-19 ನಿಲ್ಲದ ಕೊರೊನಾ ಓಟ : ದೇಶದಲ್ಲಿ ನಿನ್ನೆ 1,26,789 ಜನರಿಗೆ ಸೋಂಕು
ನವದೆಹಲಿ : ಕೊರೊನಾ ಎರಡನೇ ಅಲೆ ರಾಕೆಟ್ ವೇಗದಲ್ಲಿ ಮುನ್ನುಗುತ್ತಿದ್ದು, ನಿನ್ನೆ ಭಾರತದಲ್ಲಿ ಬರೋಬ್ಬರಿ 1,26,789 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಇದೇ ಅವಧಿಯಲ್ಲಿ ದೇಶದಲ್ಲಿ 685 ಸೋಂಕಿತರು ಸಾವನ್ನಪ್ಪಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,26,789 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,29,28,574ಕ್ಕೆ ಏರಿಕೆಯಾಗಿದೆ.
ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ 1,66,862 ಕ್ಕೆ ತಲುಪಿದೆ.
ನಿನ್ನೆ 59,258 ಜನ ಕಿಲ್ಲರ್ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದರೊಂದಿಗೆ 1,18,51,393 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ದೇಶದಲ್ಲಿನ್ನೂ ಸಕ್ರಿಯ ಪ್ರಕರಣಗಳು 9,10,319 ಇದೆ. ಇಲ್ಲಿವರೆಗೆ 25,26,77,379 ಸಾಂಪಲ್ ಟೆಸ್ಟ್ ಮಾಡಿದ್ದು, ನಿನ್ನೆ ಒಂದೇ ದಿನ 12,37,781 ಜನರನ್ನು ಪರೀಕ್ಷೆಗೆ ಒಳಪಡಿಸಿದೆ.
