14 ವರ್ಷದ ಬಾಲಕಿಯ ಮೇಲೆ 6 ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ತಮಿಳುನಾಡು : 6 ಮಂದಿ ಕಾಮುಕರು ಸೇರಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿದ ರಾಜದಾನಿ ಚೆನ್ನೈನ ಪೊಲಾಚಿಯಲ್ಲಿ ಬೆಳಕಿಗೆ ಬಂದಿದೆ.. ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಮೊದಲಿಗೆ ಬಾಲಕಿಯೂ ಆರೋಪಿಗಳ ಬೆದರಿಕೆಗೆ ಹೆದರಿಕೊಂಡು ಮನೆಯಲ್ಲಿ ಹೇಳಿಕೊಂಡಿರಲಿಲ್ಲ.. ಆದ್ರೆ ಕೆಲ ದಿನಗಳ ನಂತರ ಆಕೆಗೆ ತೀರಾ ಹೊಟ್ಟೆ ನೋವು ಕಾಣಿಸಿಕೊಂಡಿದೆ.. ಪೋಷಕರು ಆಸ್ಪತ್ರೆಗೆ ದಾಖಲಿಸಿದ ನಂತರ ಬಾಲಕಿಯು ಗರ್ಭಿಣಿಯಾಗಿರುವ ವಿಚಾರವನ್ನ ವೈದ್ಯರು ಬಹಿರಂಗಪಡಿಸಿದ್ದಾರೆ.
ನಂತರ ಮಗಳ ಬಳಿ ಸತ್ಯ ವಿಚಾರಿಸಿದಾಗ ಆಕೆ ನಡೆದ ವಿಚಾರವನ್ನ ಬಹಿರಂಗ ಪಡಿಸಿದ್ದು, ಪೋಷಕರು ತೆರಳಿ ಪೊಲೀಸ್ ಠಾಣೆಯಲ್ಲಿ ಪ್ರಜರಣ ದಾಖಲು ಮಾಡಿದ್ದಾರೆ.. ಆರೋಪಿಗಳ ಪೈಕಿ ಕೆಲವರು ಅಪ್ರಾಪ್ತರು ಎನ್ನಲಾಗಿದೆ.. ಪೊಲೀಸರ ಪ್ರಕಾರ ಬಾಲಕಿಯು ಆರೋಪಿಗಳ ಪೈಕಿ ಒಬ್ಬನ ಜೊತೆ ಸಂಬಂಧವಿಟ್ಟುಕೊಂಡಿದ್ದಳು.. ನಂತರ ಆತ ಆಕೆಯನ್ನ ಕರೆಸಿಕೊಂಡು ಸ್ನೇಹಿತರ ಜೊತೆ ಸೇರಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.