ನವದೆಹಲಿ: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ವಿಶ್ವಕಪ್ ಫೈನಲ್ ಪಂದ್ಯವು ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶ ಸಾರಿರುವ ಅವರು, 140 ಕೋಟಿ ಭಾರತೀಯರು ಐದು ಬಾರಿ ವಿಶ್ವ ಚಾಂಪಿಯನ್ ಗಳ ವಿರುದ್ಧ ಮೈದಾನಕ್ಕಿಳಿದಿರುವಾಗ ತಂಡದ ಪರ ನಿಂತಿದ್ದಾರೆ ಎಂದು ಹೇಳಿದ್ದಾರೆ.
ನಾಯಕ ರೋಹಿತ್ ಶರ್ಮಾ ಮತ್ತು ಅವರ ನಿಲುವುಗಳು ಕ್ರೀಡಾಸ್ಫೂರ್ತಿ ಎತ್ತಿಹಿಡಿಯುವಂತಿದೆ. ಯಾವುದೇ ಘರ್ಷಣೆಯಲ್ಲಿ ತೀವ್ರ ಪೈಪೋಟಿ ನೀಡುತ್ತವೆ ಎಂದು ಮೋದಿ ಹಾರೈಸಿದ್ದಾರೆ. ಅಭಿನಂದನೆಗಳು ಟೀಂ ಇಂಡಿಯಾ! 140 ಕೋಟಿ ಭಾರತೀಯರು ನಿಮಗಾಗಿ ಹುರಿದುಂಬಿಸುತ್ತಿದ್ದಾರೆ. ನೀವೆಲ್ಲ ಪ್ರಕಾಶಮಾನವಾಗಿ ಮಿಂಚಲಿ, ಉತ್ತಮವಾಗಿ ಆಡಲಿ ಹಾಗೂ ಕ್ರೀಡಾ ಮನೋಭಾವವನ್ನು ಎತ್ತಿ ಹಿಡಿಯಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.