1,459 ಬಾಕ್ಸ್ `ಮದ್ಯ ಕಾಣೆಯಾಗಲು ಇಲಿ ಕಾರಣ’ವಂತೆ..!!
ಲಕ್ನೋ : ಪೊಲೀಸ್ ಠಾಣೆಯಲ್ಲಿದ್ದ 1,459 ಬಾಕ್ಸ್ ಅಕ್ರಮ ಮದ್ಯ ಕಾಣೆಯಾಗಲು ಇಲಿಗಳೇ ಕಾರಣ ಎಂದು ಪೊಲೀಸರು ಆರೋಪಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಇಟಾ ಜಿಲ್ಲೆಯ ಕೊತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿದ್ದ 1,459 ಅಕ್ರಮ ಮದ್ಯದ ಬಾಕ್ಸ್ ಗಳು ಇರಲಿಸಲಾಗಿತ್ತು.
ಆದರೆ ಇದೀಗ ಮದ್ಯದ ಎಲ್ಲ ಬಾಕ್ಸ್ ಗಳು ಕಾಣೆಯಾಗಿದ್ದು, ಇದಕ್ಕೆ ಇಲಿಗಳೇ ಕಾರಣ, ಅವು ಬಾಕ್ಸ್ ಗಳನ್ನು ಕಚ್ಚಿ ಹಾಳು ಮಾಡಿವೆ ಎಂದು ಪೊಲೀಸರು ಹೇಳಿದ್ದಾರೆ.
ಈ ಮದ್ಯ ಬರೋಬ್ಬರಿ 35 ಲಕ್ಷ ರೂ. ಬೆಲೆಬಾಳುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನು ಮಧ್ಯೆ ಕಾಣೆಯಾಗಿರುವ ಸಂಬಂಧ ಆಗ್ರಾ ವಲಯದ ಎಡಿಜಿ ತನಿಖೆಗೆ ಆದೇಶಿಸಿದ್ದು, ಅಲೀಘರ್ ಐಪಿಎಸ್ ಅಧಿಕಾರಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
